ETV Bharat / state

ನಟ ಪುನೀತ್ ಹೆಸರಿನಲ್ಲಿ 24x7 ಗ್ರಂಥಾಲಯ ಆರಂಭ : ಪೊಲೀಸ್ ಪೇದೆ ಕಾರ್ಯಕ್ಕೆ ಜನರಿಂದ ಮೆಚ್ಚುಗೆ

author img

By

Published : Feb 16, 2022, 7:52 PM IST

ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಪೊಲೀಸ್ ಠಾಣೆಯಯಲ್ಲಿನ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಾಗರಾಜ ದಿಂಡವಾರ ಎಂಬುವವರು ಜಿಲ್ಲೆಯಲ್ಲಿ ಪುನೀತ್​ ರಾಜ್​ ಕುಮಾರ್​ ಹೆಸಸಿನಲ್ಲಿ ಗ್ರಂಥಾಲಯ ಆರಂಭಿಸಿದ್ದಾರೆ. ಇವರ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Yadgir police constable started library in name of actor Puneet Rajkumar
ಯಾದಗಿರಿಯಲ್ಲಿ ನಟ ಪುನೀತ್ ಹೆಸರಿನಲ್ಲಿ ಗ್ರಂಥಾಲಯ ಆರಂಬಿಸಿದ ಪೊಲೀಸ್​ ಪೇದೆ

ಯಾದಗಿರಿ: ಜಿಲ್ಲೆಯ ಶಹಾಪುರ ನಗರದ ಪೊಲೀಸ್ ಠಾಣೆಯಯಲ್ಲಿ ಸುಮಾರು 2 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪೇದೆಯೊಬ್ಬರು ತಾಲೂಕಿನ ಬಡ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ಗ್ರಂಥಾಲಯ ತೆರೆದು ಮಾದರಿಯಾಗಿದ್ದಾರೆ.

ಕಾನ್​ಸ್ಟೇಬಲ್​​ ನಾಗರಾಜ ದಿಂಡವಾರ ಎಂಬುವವರು ನಟ ಪುನೀತ್ ರಾಜ್​ಕುಮಾರ್​​​ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರ ಹೆಸರಿನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ನಗರದ ಹಳೆ ಬಸ್ ನಿಲ್ದಾಣದ ಹಳ್ಳದ ಹತ್ತಿರವೇ ಒಂದು ಬಾಡಿಗೆ ಅಂಗಡಿಯನ್ನು ಪಡೆದು ವಿದ್ಯಾರ್ಥಿಗಳ ಅಧ್ಯಯನಕ್ಕೆ ಸುವ್ಯವಸ್ಥಿತ ಆಸನಗಳೊಂದಿಗೆ ಗ್ರಂಥಾಲಯ ಆರಂಭಿಸಿದ್ದು, ಇಲ್ಲಿಗೆ ದಿನಪ್ರತಿ ಸುಮಾರು 50 ರಿಂದ 60 ವಿದ್ಯಾರ್ಥಿಗಳು ಆಗಮಿಸಿ ಅಧ್ಯಯನ ಮಾಡುತ್ತಿದ್ದಾರೆ. ನಾಗರಾಜ ಅವರ ಕಾರ್ಯಕ್ಕೆ ಮಿತ್ರರಾದ ಸಾಯಬಣ್ಣ, ವಿಶ್ವನಾಥ, ಆನಂದ, ಶಿವಪುತ್ರ ಕೈಜೋಡಿಸಿದ್ದಾರೆ.

ಗ್ರಂಥಾಲಯದ ವಿಶೇಷತೆ:

ಈ ಗ್ರಂಥಾಲಯದಲ್ಲಿ ಪೊಲೀಸ್, ಬ್ಯಾಂಕಿಂಗ್, ಐಎಎಸ್, ಕೆಎಎಸ್, ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗಾಗಿ ನಡೆಯುವ ಎಲ್ಲಾ ಪರೀಕ್ಷೆಗಳಿಗೆ ಪೂರ್ವ ತಯಾರಿ ನಡೆಸಲು ಬೇಕಾಗುವ ಅಧ್ಯಯನದ ವಿವಿಧ ಪುಸ್ತಕಗಳು, ದಿನಪತ್ರಿಕೆಗಳು, ಮಾದರಿ ಪ್ರಶ್ನೆಪತ್ರಿಕೆಗಳು ಸೇರಿದಂತೆ ಅನೆಕ ಪುಸ್ತಕಗಳ ಸಂಗ್ರಹವಿದೆ. ಸಿಸಿ ಕ್ಯಾಮೆರಾ, ಶುದ್ಧ ಕುಡಿವ ನೀರು ವ್ಯವಸ್ಥೆ ಮಾಡಲಾಗಿದೆ. ಕೆಲವರಿಗೆ ಲ್ಯಾಪ್‌ಟಾಪ್‌ಗಾಗಿ ವಿದ್ಯುತ್ ಅಲ್ಲದೆ ವೈಫೈ (ಇಂಟರ್‌ನೆಟ್) ಸೌಲಭ್ಯವನ್ನು ಉಚಿತವಾಗಿ ನೀಡುತ್ತಿದ್ದಾರೆ. ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಆಸನಗಳ ಸೌಲಭ್ಯ ಹೊಂದಿದೆ.

ಪುನೀತ್ ರಾಜಕುಮಾರ ಅವರು ಅದೆಷ್ಟೋ ಜನರಿಗೆ ಸಹಾಯ ಮಾಡಿ ಎಲ್ಲರ ಹೃದಯದಲ್ಲಿ ಮನೆ ಮಾಡಿದ್ದಾರೆ. ಅವರ ಕಾರ್ಯಗಳ ಸವಿ ನೆನಪಿನಲ್ಲಿ ಈ ಗ್ರಂಥಾಲಯಕ್ಕೆ ಅವರ ಹೆಸರಿಡಲಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಶಿಕ್ಷಕರ ಮೂಲಕ ಟಿಚಿಂಗ್ ನೀಡಬೇಕೆನ್ನುವ ಆಶಯ ಇದೆ. ಅನುಕೂಲವಾದರೆ ಮುಂದಿನ ದಿನಗಳ ಮಾಡಲಾಗುವುದು ಎನ್ನುತ್ತಾರೆ ಕಾನ್​ಸ್ಟೇಬಲ್​​ ನಾಗರಾಜ ದಿಂಡವಾರವರು.

ಇಲ್ಲಿಯವರೆಗೂ ಶಹಾಪುರ ನಗರದಲ್ಲಿ ಇಂತಹ ಸೌಲಭ್ಯವರುವ ಗ್ರಂಥಾಲಯ ಇರಲಿಲ್ಲ. ಗ್ರಂಥಲಾಯ ಹರಿಸಿ ಧಾರವಾಡ, ಬೆಂಗಳೂರು ಹೋಗಿ ಹೋಗಬೇಕಾಗಿತ್ತು. ಈ ರೀತಿ ಲೈಬ್ರರಿ ಆಗಿರುವುದು ಒಳ್ಳೆಯ ಕಾರ್ಯ. ಇದು ಹೆಚ್ಚಿನ ರೀತಿಯಲ್ಲಿ ಬೆಳೆಯುತ್ತಾ ಹೋಗಬೇಕು. ಸಮಯ ಇದ್ದಾಗ ಓದಲು ಅನುಕೂಲವಾಗಿದೆ ಎಂದು ಗ್ರಂಥಾಲಯಕ್ಕೆ ಬರುವವ ಕೃಷ್ಣಾ ಎಂಬುವವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್ ಅಧಿಕಾರಿಗೆ ಕೂಲ್ ಡ್ರಿಂಕ್ ಹಂಚುವ ಶಿಕ್ಷೆ ವಿಧಿಸಿದ ಗುಜರಾತ್​​ ಹೈಕೋರ್ಟ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.