ಯಾದಗಿರಿ: ತುತ್ತಿನ ಹೊಟ್ಟೆ ತುಂಬಿಸಿಕೊಳ್ಳಲು ಜಿಲ್ಲೆಗೆ ಆಗಮಿಸಿದ್ದ ಒಡಿಶಾ ರಾಜ್ಯದ ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತ ಕೆಎಸ್ಆರ್ಟಿಸಿ ಬಸ್ ಮೂಲಕ ಅವರ ತವರಿಗೆ ಕಳುಹಿಸಿಕೊಟ್ಟಿದೆ.
ಕೊರೊನಾ ಲಾಕ್ಡೌನ್ನಿಂದ ತಮ್ಮ ತವರಿಗೆ ಹೋಗದೆ ಯಾದಗಿರಿಯಲ್ಲಿ ಸಿಲುಕಿಕೊಂಡಿದ್ದ ಒಡಿಶಾ ರಾಜ್ಯದ 150 ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತ ಐದು ಕೆಎಸ್ಆರ್ಟಿಸಿ ಬಸ್ ಮೂಲಕ ಅವರ ತವರಿಗೆ ಕಳುಹಿಸಿಕೊಟ್ಟಿದೆ. ಸರ್ಕಾರದ ಆದೇಶದಂತೆ ಜಿಲ್ಲೆಯ ವಿವಿಧೆಡೆ ಕೆಲಸ ಮಾಡುತ್ತಿದ್ದ ಈ ವಲಸೆ ಕಾರ್ಮಿಕರ ದಾಖಲಾತಿ ಪರಿಶೀಲಿಸಿ ಅವರ ಆರೋಗ್ಯ ತಪಾಸಣೆ ಬಳಿಕ ಅವರನ್ನ ಯಾದಗಿರಿ ಜಿಲ್ಲಾಡಳಿತ ಭವನದಿಂದ ಬೆಂಗಳೂರಿನ ವರೆಗೆ ಉಚಿತವಾಗಿ ಕೆಎಸ್ಆರ್ಟಿಸಿ ಬಸ್ ಮೂಲಕ ಕಳುಹಿಸಿಕೊಡಲಾಯಿತು.
ಬೆಂಗಳೂರಿನಿಂದ ಒಡಿಶಾವರೆಗೂ ಈ ಕಾರ್ಮಿಕರಿಗಾಗಿ ಸರ್ಕಾರ ರೈಲಿನ ವ್ಯವಸ್ಥೆ ಮಾಡಿದ್ದು, ತಮ್ಮ ತವರಿಗೆ ತಲುಪಲಿದ್ದಾರೆ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.