ETV Bharat / state

ಟಿಕ್​ಟಾಕ್​ ಖಯಾಲಿಗೆ ವನ್ಯಜೀವಿಗಳ ಬೇಟೆ: ಯಾದಗಿರಿಯಲ್ಲಿ ಸಹೋದರರಿಬ್ಬರು ಅಂದರ್​ - Tiktok video

ಯಾದಗಿರಿ ಜಿಲ್ಲೆಯಲ್ಲಿ ಟಿಕ್​ಟಾಕ್ ಹಾವಳಿ ಹೆಚ್ಚಾಗಿದೆ. ವನ್ಯಜೀವಿಗಳನ್ನು ಬೇಟೆಯಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಯುವಕರ ಹುಚ್ಚಾಟ ಪ್ರದರ್ಶನಕ್ಕೆ ಆಕ್ರೋಶ ಎಲ್ಲೆಡೆ ಆಕ್ರೋಶ ವ್ಯಕ್ತವಾಗ್ತಿದೆ. ಹೀಗೆ ವನ್ಯಜೀವಿಗಳ ಬೇಟೆಯಾಡಿ ಟಿಕ್​ಟಾಕ್ ಮಾಡಿದ ಆರೋಪದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಯು ಸಹೋದರರಿಬ್ಬರನ್ನು ಜೈಲಿಗೆ ಅಟ್ಟಿದ್ದಾರೆ.

hunting animals for tiktok video
ಯಾದಗಿರಿಯಲ್ಲಿ ಸಹೋದರಿಬ್ಬರ ಬಂಧನ
author img

By

Published : Jun 16, 2020, 7:16 PM IST

ಯಾದಗಿರಿ: ವನ್ಯಜಿವಿ ಉಡಗಳನ್ನು ಕೊಂದು ಆ ವಿಡಿಯೋಗಳನ್ನ ಟಿಕ್​ಟಾಕ್ ಮಾಡುವ ಮೂಲಕ ಕೆಲ ಯುವಕರು ದುಷ್ಕೃತ್ಯಕ್ಕೆ ಮುಂದಾಗಿರುವ ಎರಡು ಪ್ರತ್ಯಕ ಘಟನೆಗಳು ಜಿಲ್ಲೆಯಲ್ಲಿ ನಡೆದಿವೆ. ಈ ಕೃತ್ಯಕ್ಕೆ ಪ್ರಾಣಿ ಪ್ರಿಯರಿಂದ ಆಕ್ರೋಶ ವ್ಯಕ್ತವಾಗಿದೆ.

ಯಾದಗಿರಿಯ ಬಿ ಸರ್ವೆ ನಂ 15 ರ ಅರಣ್ಯ ಪ್ರದೇಶದಲ್ಲಿ ಸಹೋದರರಿಬ್ಬರು ಈ ದುಷ್ಕೃತ್ಯ ಎಸಗಿದ್ದಾರೆ. ಇನ್ನೊಂದು ಪ್ರಕರಣ ಸುರಪುರ ತಾಲೂಕಿನ ಅರಣ್ಯ ಭಾಗದಲ್ಲಿ ಜರುಗಿದೆ. ಉಡವನ್ನು ಕೊಂದು ಟಿಕ್​ಟಾಕ್ ವಿಡಿಯೋ ಮಾಡಿ ರಾಜ್ಯದೆಲ್ಲೆಡೆ ಹರಿಬಿಟ್ಟಿದ್ದರು. ಇದರಿಂದ ಎಚ್ಚೆತ್ತುಕೊಂಡ ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಅರಣ್ಯಾಧಿಕಾರಿ ರವಿಶಂಕರ್ ಅವರ ಮಾರ್ಗದರ್ಶನದಂತೆ ಆರ್​ಎಫ್​ಓ ಸುನಿಲ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಿ ಮೂರು ದಿನಗಳ ಕಾಲ ಸತತ ಕಾರ್ಯಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೋಯಿಲುರು ಗ್ರಾಮದ ಮಲ್ಲಪ್ಪ ಮತ್ತು ಶರಣಪ್ಪ ಎಂಬುವರನ್ನು ಬಂಧಿಸಿದ ಅಧಿಕಾರಿಗಳು ವನ್ಯಜೀವಿ ಸಂರಕ್ಷಣೆ ಕಾಯ್ದೆ 1972ರ ಅನ್ವಯ ಮೂರು ಪ್ರತ್ಯೇಕ ಪ್ರಕರಣಗಳನ್ನ ದಾಖಲಿಸಿ ನ್ಯಾಯಾಂಗ ಬಂಧನದಲ್ಲಿಟ್ಟಿದ್ದಾರೆ.

ವನ್ಯಜೀವಿಗಳ ಬೇಟೆ ಹಿನ್ನೆಲೆ ಯಾದಗಿರಿಯಲ್ಲಿ ಸಹೋದರರಿಬ್ಬರ ಬಂಧನ

ಕಳೆದ 10 ದಿನಗಳ ಹಿಂದೆ ಈ ಸಹೋದರರಿಬ್ಬರು ತಮ್ಮ ಗ್ರಾಮದ ಪಕ್ಕದಲ್ಲಿರುವ ಸರ್ವೆ ನಂ 115ರ ಅರಣ್ಯ ಪ್ರದೇಶದಲ್ಲಿ ಉಡವನ್ನ ಕೊಂದು ಟಿಕ್​​ಟಾಕ್ ಮಾಡಿ ಆ ವಿಡಿಯೋವನ್ನು ತಮ್ಮ ಸ್ನೇಹಿತನ ಟಿಕ್​ಟಕ್ ಅಕೌಂಟ್​ನಿಂದ ಸಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್​​ ಮಾಡಿದ್ದರು. ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸುರಪುರ ತಾಲೂಕಿನ ವ್ಯಾಪ್ತಿಯಲ್ಲಿ ಮೂರು ಜನ ಯುವಕರು ನಡಿಸಿರುವ ದುಷ್ಕೃತ್ಯ ಕುರಿತು ತನಿಖೆ ಕೈಗೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಮೂರು ತಂಡಗಳನ್ನ ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.