ಯಾದಗಿರಿ: ಮಹಾರಾಷ್ಟ್ರದಿಂದ ಇತ್ತೀಚೆಗೆ ಯಾದಗಿರಿಗೆ ಆಗಮಿಸಿದ 9 ವರ್ಷದ ಬಾಲಕ ಸೇರಿದಂತೆ, 5 ವರ್ಷದ ಬಾಲಕಿಯಲ್ಲಿ ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಿಂದ ಪೋಷಕರೊಂದಿಗೆ ಆಗಮಿಸಿದ 9 ವರ್ಷದ ಬಾಲಕ ರೋಗಿ- 1743 ಹಾಗೂ 5 ವರ್ಷದ ಬಾಲಕಿ ರೋಗಿ- 1733 ಇಬ್ಬರಿಗೂ ಕೊರೊನಾ ವೈರಸ್ ವಕ್ಕರಿಸಿದೆ. ಕಳೆದ ಮೇ.12 ರಂದು ಮಹಾರಾಷ್ಟ್ರದಿಂದ ಸೋಂಕು ತಗಲಿರುವ ಬಾಲಕ ಹಾಗೂ ಬಾಲಕಿ ಪೋಷಕರೊಂದಿಗೆ ಯಾದಗಿರಿಗೆ ಆಗಮಿಸಿದ್ದರು.
ಜಿಲ್ಲೆಗೆ ಆಗಮಿಸಿದ ಇವರನ್ನ ಶಹಪುರ ತಾಲೂಕಿನ ಕನ್ಯಾಕೊಳ್ಳೂರು ಗ್ರಾಮದ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಸೋಂಕು ತಗುಲಿರುವ ಬಾಲಕ ಮತ್ತು ಬಾಲಕಿಯನ್ನ ನಗರದ ನೂತನ ಜಿಲ್ಲಾಸ್ಪತ್ರೆಯ ಕೋವಿಡ್ 19 ವಾರ್ಡ್ಗೆ ದಾಖಲಿಸಲಾಗಿದೆ.
ಮಹಾರಾಷ್ಟ್ರದಿಂದ ವಾಪಸ್ ಆಗಮಿಸುತ್ತಿರುವ ವಲಸೆ ಕಾರ್ಮಿಕರಲ್ಲೇ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಜಿಲ್ಲೆಯ ಜನರಲ್ಲಿ ಮತ್ತಷ್ಟು ಭೀತಿ ಹೆಚ್ಚಾಗಿದೆ.