ಯಾದಗಿರಿ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ನನ್ನನ್ನ ಗುರುತಿಸಿ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಾಡಿದ್ದು ಖುಷಿಯಾಗಿದೆ ಅಂತಾ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಸಂತಸ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕೋಲಿ ಸಮಾಜದ ಅಭಿವೃದ್ಧಿ ಪರ್ವ ಪ್ರಾರಂಭವಾಗಲಿದೆ ಎನ್ನುವ ಬದಲು ಕೋಲಿ ಸಮಾಜದ ಪ್ರವರ್ಗ ಪ್ರಾರಂಭವಾಗಲಿದೆ ಅಂತಾ ತಪ್ಪು ನುಡಿಯುವ ಮೂಲಕ ಚಿಂಚನಸೂರ ಯಡವಟ್ಟು ಮಾಡಿಕೊಂಡರು. ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸಲು ಸ್ವಲ್ಪ ದಿನಗಳಲ್ಲೇ ಸಿಎಂ ಬಿಎಸ್ವೈ ಅವರು ನನ್ನನ್ನ ಮತ್ತು ಸಮಾಜದ ಮುಖಂಡರನ್ನ ದೆಹಲಿಗೆ ಕರೆದುಕೊಂಡು ಹೋಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾರನ್ನ ಭೇಟಿ ಮಾಡಿಸಲಿದ್ದಾರೆ ಅಂತಾ ಭರವಸೆ ನೀಡಿದರು. ಕೋಲಿ ಸಮಾಜ ಅಭಿವೃದ್ದಿಗೆ ಸಿಎಂ ಅವರು ನೂರು ಕೋಟಿ ಹಣ ನೀಡಲಿದ್ದಾರೆ ಅಂತಾ ತಿಳಿಸಿದ್ರು.
ಇನ್ನು, ಆಪರೇಷನ್ ಕಮಲದ ಬಗ್ಗೆ ಮಾಧ್ಯಮದವರು ಕೆಳಿದ ಪ್ರಶ್ನೆಗೆ ಉತ್ತರಿಸಿದ ಚಿಂಚನಸೂರ, ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಸಂಪೂರ್ಣ ಕಳೆದುಕೊಂಡಿದೆ. ದೇಶದೆಲ್ಲೆಡೆ ಬಿಜೆಪಿ ಗಾಳಿ ಇದ್ದು ಒಂದು ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಬೇರೆ ಯಾರೇ ಬಿಜೆಪಿ ಪಕ್ಷಕ್ಕೆ ಬಂದ್ರೆ ಅವರಿಗೆ ಸ್ವಾಗತ ಅಂದರು.