ETV Bharat / state

ಯಾದಗಿರಿ: ಮಳೆಗೆ ಬಡಾವಣೆಯೊಳಗೆ ನುಗ್ಗಿದ ನೀರು... ಮುಳುಗಿದ ವಾಹನಗಳು - North Karnataka Flood

ನಗರದ ಶಹಪುರ ಭಾಗದಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಬಡಾವಣೆಯೇ ಸಂಪೂರ್ಣ ನೀರಿನಿಂದ ಜಲಾವೃತವಾಗಿದೆ. ಬಡಾವಣೆಯೊಳಗೆ ನುಗ್ಗಿದ ನೀರಿನಿಂದಾಗಿ ವಾಹನಗಳು ಮುಳುಗಡೆಯಾಗಿವೆ.

Water logged into part of Yadgiri shahara area
ಮಳೆಯಿಂದ ಕೊಚ್ಚಿಹೋದ ವಾಹನಗಳು
author img

By

Published : Sep 26, 2020, 2:10 PM IST

ಯಾದಗಿರಿ: ವರುಣನ ಆರ್ಭಟಕ್ಕೆ ಜಿಲ್ಲೆಯ ಜನ ತತ್ತರಿಸಿದ್ದು, ಮನೆ ಎದುರಿಗೆ ನಿಲ್ಲಿಸದ್ದ ವಾಹನಗಳು ನೀರಿನಲ್ಲಿ ಮುಳುಗಿ ಕೊಚ್ಚಿ ಹೋಗುವ ಭೀತಿ ಎದುರಾಗಿದೆ. ಇಲ್ಲಿನ ಶಹಪುದಲ್ಲಿ ಮಳೆಯಿಂದಾಗಿ ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿದ್ದು, ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಿವೆ.

ರಾತ್ರಿ ಸುರಿದ ಮಳೆಗೆ ಬಡಾವಣೆಯೊಳಗೆ ನುಗ್ಗಿದ ನೀರು... ವಾಹನಗಳು ಜಲಾವೃತ

ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ಶಹಪುರ ನಗರದ ಪಕ್ಕದ ನಾಗರ ಕೆರೆ ನೀರು ನಗರದ ಚರಬಸವೇಶ್ವರ ಬಡಾವಣೆಗೆ ನುಗ್ಗಿದ ಪರಿಣಾಮ ಮನೆ ಎದರುಗಡೆ ನಿಲ್ಲಿಸಿದ್ದ ಕಾರುಗಳು ಸಂಪೂರ್ಣ ಮುಳುಗಡೆಯಾಗುವ ಮೂಲಕ ಕೆಲ ದ್ವಿಚಕ್ರ ವಾಹನಗಳನ್ನು ಜನರು ನೀರಿನಿಂದ ಹೊರ ತೆಗೆದಿದ್ದಾರೆ. ಚರಬಸವೇಶ್ವರ ಬಡವಣೆಯಿಂದ ಗದ್ದಿಗೆಗೆ ಹೊಗುವ ರಸ್ತೆಗಳೆಲ್ಲಾ ನೀರಿನಿಂದ ಜಲಾವೃತಗೊಂಡಿದ್ದು, ಮನೆಗಳ ಅಂಗಳಕ್ಕೆ ನೀರು ನುಗ್ಗಿದೆ.

ಇನ್ನು ಮಳೆ ನೀರಿನಿಂದ ವಾಹನ ರಕ್ಷಿಸಿಕೊಳ್ಳಲು ಜನರು ಹರಸಾಹಸ ಪಡುತ್ತಿದ್ದು, ಅವೈಜ್ಞಾನಿಕ ಒಳಚರಂಡಿ ನಿರ್ಮಾಣದ ವಿರುದ್ಧ ಜನತೆ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಕೂಡಲೇ ಬಡಾವಣೆ ವ್ಯಾಪ್ತಿಯೊಳಗೆ ಸಿಸಿ ರಸ್ತೆ ಕಾಮಗಾರಿ ಕೈಗೊಂಡು ಮಳೆಯಿಂದಾಗುವ ಅನಾಹುತ ತಪ್ಪಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.