ETV Bharat / state

ಮತದಾರರ ಪಟ್ಟಿ ಪರಿಷ್ಕರಣೆಗೆ ಅ. 31ರವರೆಗೆ ಅವಕಾಶ - Gurumathakkal Tahsildar Sangamesh Jeda

ಮತದಾರರ ಪಟ್ಟಿ ತಿದ್ದುಪಡಿ ಮತ್ತು ಸೇರ್ಪಡೆಗೆ ಅ. 31ರವರೆಗೆ ಅವಕಾಶವಿದೆ ಎಂದು ಗುರುಮಠಕಲ್ ತಹಶೀಲ್ದಾರ್​ ಸಂಗಮೇಶ ಜಿಡಗೆ ಮಾಹಿತಿ ನೀಡಿದ್ದಾರೆ.

dasd
ಸಂಗಮೇಶ ಜಿಡಗೆ
author img

By

Published : Aug 26, 2020, 10:18 AM IST

ಗುರುಮಠಕಲ್: ಮತದಾರರ ಪಟ್ಟಿ ಹೆಸರು ಪರಿಷ್ಕರಣೆಗೆ ಅ. 31ರವರೆಗೆ ಅವಕಾಶವಿದ್ದು, ಜ. 1, 2021ಕ್ಕೆ 18 ವರ್ಷ ಪೂರೈಸುವವರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಹಶೀಲ್ದಾರ್​ ಸಂಗಮೇಶ ಜಿಡಗೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸಂಗಮೇಶ ಜಿಡಗೆ

ತಮ್ಮ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ತೆರವುಗೊಳಿಸುವುದು ಅಥವಾ ಬದಲಾವಣೆಗಳಿಗೆ ಅ. 31ರವರೆಗೆ ಅವಕಾಶವಿದೆ. ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸುವಂತೆ ತಿಳಿಸಿದ್ದಾರೆ.

ಹೊಸ ಸೇರ್ಪಡೆಗೆ ನಮೂನೆ 6, ಮೃತಪಟ್ಟಿದ್ದರೆ, ಬೇರೆಡೆಗೆ ಸ್ಥಳಾಂತರವಾಗಿದ್ದರೆ, ಒಂದಕ್ಕಿಂತ ಹೆಚ್ಚಿನ ಭಾಗಗಳಲ್ಲಿ ಹೆಸರಿದ್ದರೆ ಅದನ್ನು ಪಟ್ಟಿಯಿಂದ ಅಳಿಸಲು ನಮೂನೆ 7, ಈ ಮೊದಲೇ ನೋಂದಾಯಿಸಿದ್ದು ಹೆಸರು, ತಂದೆ ಅಥವಾ ಗಂಡನ ಹೆಸರು, ವಿಳಾಸ ಸೇರಿದಂತೆ ಯಾವುದೇ ಬದಲಾವಣೆಗಳಿದ್ದರೆ ನಮೂನೆ 8 ಅರ್ಜಿ ಬಳಸಬಹುದಾಗಿದೆ. ಮತಕ್ಷೇತ್ರದ ವ್ಯಾಪ್ತಿಯ ಇತರೆ ಭಾಗಕ್ಕೆ ಬದಲಾವಣೆ ಮಾಡಿಕೊಳ್ಳುವುದಿದ್ದರೆ ನಮೂನೆ 8 ಎ ಅರ್ಜಿ ನಮೂನೆಗಳನ್ನು ಬಳಕೆ ಮಾಡಬೇಕು ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.