ಯಾದಗಿರಿ: ನಗರದ ರಸ್ತೆ ಬದಿಯಲ್ಲಿ ಅವೈಜ್ಞಾನಿಕವಾಗಿ ಮ್ಯಾನ್ಹೋಲ್ ನಿರ್ಮಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಲ್ಲದೆ, ಈ ಮ್ಯಾನ್ಹೋಲ್ಗಳಿಂದ ಪ್ರತಿನಿತ್ಯ ಕಿರಿಕಿರಿ ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ.
ನಗರದ ಮುಖ್ಯ ರಸ್ತೆಗಳಲ್ಲಿ ಒಳಚರಂಡಿ ನಿರ್ಮಿಸಿದ್ದು, ಇದರ ಜೊತೆಗೆ ಅವೈಜ್ಞಾನಿಕ ಮ್ಯಾನ್ ಹೋಲ್ಗಳನ್ನು ಸಹ ನಿರ್ಮಾಣ ಮಾಡಲಾಗಿದೆ. ಇವುಗಳು ರಸ್ತೆ ಮಟ್ಟಕ್ಕಿಂತಲೂ ಎತ್ತರದಲ್ಲಿರುವುದರಿಂದ ಅಪಘಾತಗಳು ಸಂಭವವಿಸುತ್ತಿವೆ ಎನ್ನುತ್ತಿದ್ದಾರೆ ಸ್ಥಳೀಯರು.
ಈ ಸಮಸ್ಯೆಯನ್ನು ಸರಿಪಡಿಸಬೇಕಾದ ನಗರಸಭೆಯ ಎದರಿನ ರಸ್ತೆಗಳಲ್ಲೇ ಈ ತರಹದ ಹತ್ತಾರು ಮ್ಯಾನ್ಹೋಲ್ಗಳಿವೆ. ಆದರೆ ನಗರಸಭೆ ಅಧಿಕಾರಿಗಳು ಮಾತ್ರ ಇದನ್ನು ಸರಿಪಡಿಸುವ ಗೋಜಿಗೆ ಮಾತ್ರ ಹೋಗಿಲ್ಲ ಎನ್ನಲಾಗ್ತಿದೆ.
ನಗರಸಭೆ ಕಚೇರಿ, ಸ್ವಪ್ನ ಕಾಲೇಜು ಮೈದಾನ, ಡಿಹೆಚ್ಓ ಕಚೇರಿ ಎದುರಿನ ಬಸ್ ನಿಲ್ದಾಣ ಮುಂದೆ, ಹೀಗೆ ನಗರದ ಹಲವೆಡೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಎತ್ತರದ ಮ್ಯಾನ್ ಹೋಲ್ಗಳಿದ್ದು, ಪ್ರಯಾಣಿಕರಿಗೆ ತೊಂದರೆಯುಂಟಾಗುತ್ತಿದೆ. ಇದರಿಂದಾಗಿ ಈಗಾಗಲೇ ಸಾಕಷ್ಟು ರಸ್ತೆ ಅಪಘಾತಗಳು ಕೂಡ ಸಂಭವಿಸಿವೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ನಗರಸಭೆ ಅಧಿಕಾರಿಗಳ ಈ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೂಡಲೇ ಅಧಿಕಾರಿಗಳು ಇದನ್ನು ಸರಿಪಡಿಸಬೇಕೆಂದು ವಾಹನ ಸವಾರರು ಆಗ್ರಹಿಸುತ್ತಿದ್ದಾರೆ.