ಯಾದಗಿರಿ: ಜಿಲ್ಲೆಯಲ್ಲಿ ಇಂದು 10 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,016ಕ್ಕೆ ಏರಿದೆ. ಈ ಪೈಕಿ 871 ಜನ ಗುಣಮುಖರಾಗಿದ್ದರೆ, ಒಬ್ಬರು ಮೃತಪಟ್ಟಿದ್ದಾರೆ.
ಯಾದಗಿರಿ ನಗರದ 28 ವರ್ಷದ ಪುರುಷ (ಪಿ-26802), ಗುರುಮಠಕಲ್ ತಾಲೂಕಿನ ಗುಂಜನೂರ ಗ್ರಾಮದ 15 ವರ್ಷದ ಬಾಲಕ (ಪಿ-26803), ಶಹಾಪುರ ತಾಲೂಕಿನ ಮದ್ರಿಕಿ ಗ್ರಾಮದ 35 ವರ್ಷದ ಮಹಿಳೆ (ಪಿ-26804), ಮದ್ರಿಕಿ ಗ್ರಾಮದ 70 ವರ್ಷದ ಪುರುಷ (ಪಿ-26805), ಮದ್ರಿಕಿ ಗ್ರಾಮದ 75 ವರ್ಷದ ಪುರುಷ (ಪಿ-26806), ಶಹಾಪುರ ತಾಲೂಕಿನ ದೇವಿನಗರದ 22 ವರ್ಷದ ಪುರುಷ (ಪಿ-26807), ಶಹಾಪುರ ತಾಲೂಕಿನ ಸಗರ ಗ್ರಾಮದ 18 ವರ್ಷದ ಯುವಕ (ಪಿ-26808), ಯಾದಗಿರಿ ನಗರದ ಹಳೆ ಜಿಲ್ಲಾಸ್ಪತ್ರೆ ವಸತಿ ಬಡಾವಣೆಯ 18 ವರ್ಷದ ಯುವತಿ (ಪಿ-26809), ವಡಗೇರಾ ತಾಲೂಕಿನ ಹೈಯ್ಯಾಳ ಬಿ ಗ್ರಾಮದ 29 ವರ್ಷದ ಪುರುಷ (ಪಿ-26810), ಯಾದಗಿರಿ ಶಿವನಗರದ 40 ವರ್ಷದ ಪುರುಷ (ಪಿ-26811) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಪಿ-26802 ವ್ಯಕ್ತಿ ಮಹಾರಾಷ್ಟ್ರದ ಮುಂಬೈನಿಂದ, ಪಿ-26802 ಬಾಲಕ ತೆಲಂಗಾಣ ರಾಜ್ಯದ ಹೈದರಾಬಾದ್‍ನಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿರುತ್ತಾರೆ. ಮದ್ರಿಕಿ ಗ್ರಾಮದ ಮೂವರಿಗೆ ಪಿ-9105 ವ್ಯಕ್ತಿಯ ಸಂಪರ್ಕದಿಂದ ಪಾಸಿಟಿವ್ ಬಂದಿದೆ. ಉಳಿದ 5 ಜನ ಐಎಲ್‍ಐ ಗುಣಲಕ್ಷಣ ಹೊಂದಿದ್ದಾರೆ. ಸೋಂಕು ಪತ್ತೆಯಾದವರನ್ನೆಲ್ಲ ಚಿಕಿತ್ಸೆಗಾಗಿ ಜಿಲ್ಲೆಯ ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.