ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಕೆರೆ ತಾಂಡಾದಲ್ಲಿ ಸಿಡಿಲು ಬಡಿದು ಬಾಲಕನೊಬ್ಬ ಮೃತಪಟ್ಟಿದ್ದು, 7 ಜನರಿಗೆ ಗಾಯಗಳಾಗಿದೆ. ಹೊಸಕೇರಾ ಮೇಲಿನ ತಾಂಡಾದ ರಾಮ ರಾಠೋಡ್ ಮನೆ ಹತ್ತಿರವೇ ಸಿಡಿಲು ಬಡಿದಿದೆ. ಪವನ ರಾಠೋಡ್ (15) ಮೃತ ಬಾಲಕ.
ತಾಂಡಾದ ಬಸುನಾಯಕ್ ಚವ್ಹಾಣ್ ಎಂಬುವವರ ಗೃಹ ಪ್ರವೇಶ ಇತ್ತು. ಮುದ್ನಾಳ ದೊಡ್ಡ ತಾಂಡಾದ 9ನೇ ತರಗತಿ ವಿದ್ಯಾರ್ಥಿ ಪವನ್ ಸೇರಿದಂತೆ ನೆಂಟರು ಬಂದಿದ್ದರು. ಜೋರು ಮಳೆಯಾಗಿ ಟಿನ್ ಶೆಡ್ ಮೇಲೆ ಸಿಡಿಲು ಬಿದ್ದು ಬಾಲಕನ ಮೇಲೆ ಬಿದ್ದಿದೆ. ಅಲ್ಲಿದ್ದವರಿಗೆ ಸಿಡಿಲಿನ ಚೂರುಗಳು ಸಿಡಿದು ಗಾಯಗಳಾಗಿವೆ ಎನ್ನಲಾಗಿದೆ.
ಒಂಕಾರ ಮಹಾದೇವ ಸಿಂಧೆ, ರುದ್ರ ಮಹಾದೇವ ಸಿಂಧೆ, ತಿಪ್ಪಿಬಾಯಿ ಮಹಾದೇವ ಸಿಂಧೆ, ಸೊಬಮ್ಮ ಮಹಾದೇವ ಸಿಂಧೆ, ದೇವಿಬಾಯಿ ಸಂತೋಷ, ಭೀಮಸಿಂಗ್ ರೇವು ರಾಠೋಡ್, ಲಕ್ಷ್ಮಿಬಾಯಿ ಭೀಮು ರಾಠೋಡ್ ಅವರಿಗೆ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಸರ್ವಿಸ್ ರಿವಾಲ್ವರ್ನಿಂದ ಗುಂಡಿಕ್ಕಿ ಸಬ್ಇನ್ಸ್ಪೆಕ್ಟರ್ ಆತ್ಮಹತ್ಯೆ