ಸುರಪುರ: ತಾಲೂಕಿನ ಕವಡಿಮಟ್ಟಿ ಬಳಿಯಲ್ಲಿ ಅಪಘಾತವಾಗಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ನಿನ್ನೆ ಸಂಜೆ ಒಂಭತ್ತು ಗಂಟೆ ಸುಮಾರಿಗೆ ಲಿಂಗಸುಗೂರು ನಿಂದ ಬರುತ್ತಿದ್ದ ಟಾಟಾ ಏಸ್ ಕುಂಬಾರಪೇಟೆ ಕಡೆಯಿಂದ ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡು ಇಬ್ಬರ ಕಾಲೂ ಕೂಡ ಮುರಿದಿದೆ ಎಂದು ಹೇಳಲಾಗುತ್ತಿದೆ.
ಗಾಯಗೊಂಡವರನ್ನು ಕುಂಬಾರಪೇಟೆ ಗ್ರಾಮದ ನಿಂಗಪ್ಪ ವಗ್ಗ ಮತ್ತು ನಿಂಗಣ್ಣ ಕೆಂಗುರಿ ಎಂದು ಗುರುತಿಸಲಾಗಿದೆ. ಟಾಟಾ ಏಸ್ ನ ಚಾಲಕನಿಗೂ ಕೂಡ ಗಾಯಗಳಾಗಿದ್ದು ಸುರಪುರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.