ಸುರಪುರ : ಈಟಿವಿ ಭಾರತ ವರದಿ ಪರಿಣಾಮ ಕಲ್ಲದೇವನಹಳ್ಳಿ ಗ್ರಾಮದ ವಯೋವೃದ್ಧ ಮಹಿಳೆ ಸಾಬಮ್ಮನ ಮನೆಗೆ ಶಾಸಕರು ಭೇಟಿ ನೀಡಿ ಆಶ್ರಯ ಯೋಜನೆ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ.
ಸುರಪುರ ತಾಲೂಕಿನ ಕಲ್ಲದೇವನಹಳ್ಳಿ ಗ್ರಾಮದಲ್ಲಿ ವಯೋವೃದ್ಧೆ ಸಾಬಮ್ಮ ಹನುಮಂತ ಕಲಾಲ್ ಎಂಬ ಮಹಿಳೆಯ ಮನೆಯಲ್ಲಿ ಮಳೆ ನೀರು ನುಗ್ಗಿ ತೊಂದರೆಗೊಳಗಾಗಿದ್ದರು. ಈ ಬಗ್ಗೆ ಈಟಿವಿ ಭಾರತ ವರದಿ ಮಾಡಿತ್ತು.
ವರದಿಯನ್ನು ವೀಕ್ಷಿಸಿದ ಶಾಸಕ ನರಸಿಂಹ ನಾಯಕ ರಾಜುಗೌಡ ಅವರು ಬೆಂಗಳೂರಿನಿಂದ ಆಗಮಿಸುತ್ತಿದ್ದಂತೆ ಕಲ್ಲದೇವನಹಳ್ಳಿಯ ಆ ಮಹಿಳೆ ಮನೆಗೆ ಭೇಟಿ ನೀಡಿ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.
ಅಲ್ಲದೆ ಗ್ರಾಮದಲ್ಲಿ ಎಲ್ಲಾ ಸುತ್ತಾಡಿ ಮಳೆಯಿಂದ ಸೃಷ್ಟಿಯಾದ ಅವಾಂತರಗಳನ್ನು ಕಂಡು ಜೊತೆಗೆ ಗ್ರಾಮದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಂಡ ಗುತ್ತಿಗೆದಾರರನ್ನ ತರಾಟೆಗೆ ತೆಗೆದುಕೊಂಡರು.