ETV Bharat / state

ಲೋಕ ಸೇವಾ ಆಯೋಗಗಳು ಪರೀಕ್ಷಾ ಅಕ್ರಮ ಅಪನಂಬಿಕೆ ನಿವಾರಿಸಿ ದಕ್ಷತೆಯಿಂದ ಕೆಲಸ ಮಾಡಬೇಕು: ಉಪರಾಷ್ಟ್ರಪತಿ - JAGDEEP DHANKAR

ನೇಮಕಾತಿ ಪರೀಕ್ಷೆಗಳಲ್ಲಿ ಹಾಗೂ ಸಂದರ್ಶನಗಳಲ್ಲಿ ಪಾರದರ್ಶಕತೆ, ಸಾರ್ವಜನಿಕ ಹೊಣೆಗಾರಿಕೆಯನ್ನು ಕಾಪಾಡುವುದು ಅತಿ ಮುಖ್ಯವಾಗಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ತಿಳಿಸಿದರು.

ಉಪರಾಷ್ಟ್ರಪತಿ ಜಗದೀಪ್ ಧನಕರ್
ಉಪರಾಷ್ಟ್ರಪತಿ ಜಗದೀಪ್ ಧನಕರ್ (ETV Bharat)
author img

By ETV Bharat Karnataka Team

Published : Jan 11, 2025, 7:21 PM IST

ಬೆಂಗಳೂರು: ಲೋಕ ಸೇವಾ ಆಯೋಗಗಳು ಪರೀಕ್ಷಾ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಅಪನಂಬಿಕೆ ವಾತಾವರಣವನ್ನು ನಿವಾರಿಸಿ ಪಾರದರ್ಶಕತೆ, ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಕರೆ ನೀಡಿದರು.

ಕರ್ನಾಟಕ ಲೋಕಸೇವಾ ಆಯೋಗ ಹಾಗೂ ಕೇಂದ್ರ ಲೋಕ ಸೇವಾ ಆಯೋಗದ ವತಿಯಿಂದ ನಗರದ ಖಾಸಗಿ ಹೋಟೆಲ್​​ನಲ್ಲಿ ಹಮ್ಮಿಕೊಳ್ಳಲಾದ ರಾಜ್ಯ ಲೋಕಸೇವಾ ಆಯೋಗಗಳ ಅಧ್ಯಕ್ಷರ 25ನೇ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾವು ನಮ್ಮ ಯುವ ಜನಾಂಗದ ಭವಿಷ್ಯದ ಜೊತೆ ಚೆಲ್ಲಾಟವಾಡಲು ದುಷ್ಕರ್ಮಿಗಳಿಗೆ ಬಿಡಬಾರದು. ರಾಜ್ಯ ಲೋಕ ಸೇವಾ ಆಯೋಗ ಮಾತ್ರವಲ್ಲ, ಎಲ್ಲಾ ಪರೀಕ್ಷೆ ನಡೆಸುವ ಸಂಸ್ಥೆಗಳ ಮೇಲೆ ದೊಡ್ಡ ಹೊಣೆಗಾರಿಕೆ ಇದೆ. ನೀವೆಲ್ಲರೂ ಈ ಸಂವಿಧಾನದ ರಕ್ಷಕರಾಗಿದ್ದೀರಿ ಎಂದರು.‌

ನೇಮಕಾತಿ ಪರೀಕ್ಷೆಗಳಲ್ಲಿ ಹಾಗೂ ಸಂದರ್ಶನಗಳಲ್ಲಿ ಪಾರದರ್ಶಕತೆ, ಸಾರ್ವಜನಿಕ ಹೊಣೆಗಾರಿಕೆಯನ್ನು ಕಾಪಾಡುವುದು ಅತಿ ಮುಖ್ಯವಾಗಿದೆ. ಸೇವಾವಧಿಯನ್ನು ವಿಸ್ತರಿಸುವುದರಿಂದ ಇತರರ ಅವಕಾಶಗಳಿಗೆ ಚ್ಯುತಿ ತರುತ್ತದೆ.‌ ಹೀಗಾಗಿ ಸರ್ಕಾರಗಳು ಸೇವಾವಧಿ ವಿಸ್ತರಿಸುವುದನ್ನು ನಿಲ್ಲಿಸಬೇಕು. ನೇಮಕಾತಿ ಪರೀಕ್ಷಾ ಅಕ್ರಮಗಳ ನಿಯಂತ್ರಣಕ್ಕೆ ಕಾನೂನು ತಂದ ಸರ್ಕಾರದ ನಡೆ ಮೆಚ್ಚುವಂತದ್ದು.‌ ಇದರ ಕಟ್ಟುನಿಟ್ಟಿನ ಜಾರಿ ಲೋಕ ಸೇವಾ ಆಯೋಗ ಹಾಗೂ ಪರೀಕ್ಷೆ ನಡೆಸುವ ಸಂಸ್ಥೆಗಳ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಅಧಿಕಾರಿ ವರ್ಗ ಹಾಗೂ ರಾಜಕಾರಣಿಗಳು ತಮ್ಮ ಸಂಬಂಧಿಕರಿಗೆ ದೊಡ್ಡ ಹುದ್ದೆ ಸಿಗುವಂತೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ವಿಚಾರ.‌ ಇದು ಲೋಕ ಸೇವಾ ಆಯೋಗದ ಮೇಲಿನ ನಂಬಿಕೆಯನ್ನು ಘಾಸಿಗೊಳಿಸುತ್ತದೆ. ಭ್ರಷ್ಟತೆ ಮತ್ತು ಪಕ್ಷಪಾತವನ್ನು ತಡೆಯಲು ಲೋಕಸೇವಾ ಆಯೋಗದ ಸದಸ್ಯರು ಮರು ನೇಮಕವಾವುದನ್ನು ಸಂವಿಧಾನ ನಿರ್ಬಂಧಿಸುತ್ತದೆ. ನಿವೃತ್ತಿ ಬಳಿಕದ ನೇಮಕಾತಿ ಮತ್ತು ನಿರಂತರ ಸೇವಾವಧಿ ವಿಸ್ತರಣೆಯನ್ನು ನಿಯಂತ್ರಿಸಬೇಕು ಎಂದು ಕರೆ ನೀಡಿದರು.

ರಾಜಕೀಯ ಸಹಬಾಳ್ವೆ ರಾಷ್ಟ್ರದ ಅಭಿವೃದ್ಧಿಗೆ ಅತ್ಯಗತ್ಯವಾಗಿದೆ. ಇದು ಸುಸ್ಥಿರ ಸಂವಾದ ಮತ್ತು ರಾಷ್ಟ್ರೀಯ ಹಿತಾಸಕ್ತಿಗಾಗಿನ ಬದ್ಧತೆಯಿಂದ ಸಾಧ್ಯವಾಗಿಸುತ್ತದೆ. ರಾಜಕೀಯ ವಲಯದಲ್ಲಿ ಪರಸ್ಪರ ಸಂವಾದ ಪುನರಾರಂಭಿಸಬೇಕು. ಪಕ್ಷ ರಾಜಕೀಯದಿಂದ ಹೊರ ಬಂದು ರಚನಾತ್ಮಕ ಪಾಲ್ಗೊಳ್ಳುವಿಕೆಯಲ್ಲಿ ತೊಡಗುವಂತೆ ನಾನು ರಾಜಕಾರಣಿಗಳಿಗೆ ಮನವಿ ಮಾಡುತ್ತೇನೆ.‌ ರಾಜಕೀಯ ನಾಯಕರಲ್ಲಿ ವೈಯಕ್ತಿಕ ಆತ್ಮೀಯತೆ ಈಗ ಹೆಚ್ಚಾಗಿ ಕಾಣುತ್ತಿಲ್ಲ. ರಾಜಕೀಯ ಭಿನ್ನತೆ ಮತ್ತು ಹೆಚ್ಚಾಗುತ್ತಿರುವ ಸೈದ್ಧಾಂತಿಕ ಅತಿರೇಕತೆ ತೀವ್ರವಾಗುತ್ತಿದೆ ಎಂದು ಅಭಿಪ್ರಾಯ ಪಟ್ಟರು.

ಇದನ್ನೂ ಓದಿ: ಧರ್ಮಸ್ಥಳದಲ್ಲಿ ಭಕ್ತರಿಗಾಗಿ ಕ್ಯೂ ಕಾಂಪ್ಲೆಕ್ಸ್​, ಉಪರಾಷ್ಟ್ರಪತಿ ಜಗದೀಪ್ ಧನಕರ್​ರಿಂದ ಉದ್ಘಾಟನೆ

ಇದನ್ನೂ ಓದಿ: ಬಿಪಿಎಸ್​ಸಿ ಪರೀಕ್ಷೆ ಅವ್ಯವಹಾರ: ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡ ಪ್ರಶಾಂತ್ ಕಿಶೋರ್ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.