ಸುರಪುರ : ಈಟಿವಿ ಭಾರತ ವರದಿ ಪರಿಣಾಮ ನಗರದ ಕುಂಬಾಪೇಟೆಯಲ್ಲಿನ ಜೋಗಾರ್ ಕುಟುಂಬಗಳಿಗೆ ನ್ಯಾಯಾಧೀಶರು ಭೇಟಿ ನೀಡಿದರು.
ಜೋಗಾರ್ ಕುಟುಂಬಗಳು ವಾಸಿಸುವ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ನ್ಯಾಯಾಧೀಶರು ಮತ್ತು ತಾಲೂಕು ನ್ಯಾಯಾಧೀಶರು ಪರಿಶೀಲನೆ ನಡೆಸಿದರು. ನಂತರ ತಹಸೀಲ್ದಾರರಿಗೆ ಮಾರ್ಗದರ್ಶನ ನೀಡಿ ಕುಟುಂಬಗಳಿಗೆ ಅಗತ್ಯ ವಸ್ತುಗಳ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದರು.
ಅದರಂತೆ ಮಧ್ಯಾಹ್ನ ತಹಸೀಲ್ದಾರ್ ನಿಂಗಣ್ಣ ಬಿರಾದಾರ, ಜೋಗಾರ್ ಗುಡಿಸಲುಗಳಿಗೆ ಭೇಟಿ ನೀಡಿ ತಾಲೂಕು ಆಡಳಿತದ ವತಿಯಿಂದ ಅಕ್ಕಿ, ಬೇಳೆ, ಹಿಟ್ಟು, ಸಕ್ಕರೆ ಮತ್ತಿತರ ಪದಾರ್ಥಗಳುಳ್ಳ ಅಗತ್ಯ ವಸ್ತುಗಳ ಕಿಟ್ ವಿತರಿಸಿದರು.
ಈಟಿವಿ ಭಾರತ ಚಾನೆಲ್ ನಮಗೆ ಒಳ್ಳೆಯ ಉಪಕಾರ ಮಾಡಿದೆ. ನಿಮ್ಮ ಸಹಕಾರ ನಾವು ಎಂದಿಗೂ ಮರೆಯುವುದಿಲ್ಲ ಎಂದು ಜೋಗಾರ್ ಸಮುದಾಯದ ಯುವಕ ಅಂಬಾಜಿ ಶ್ಲಾಘನೆ ವ್ಯಕ್ತಪಡಿಸಿದರು.
ಇದನ್ನು ಓದಿ : ಕೊರೊನಾದಿಂದ ಬದುಕು ಮೂರಾಬಟ್ಟೆ: ತಿನ್ನಲು ಅನ್ನವಿಲ್ಲದೇ ಜೋಗಾರ್ ಕುಟುಂಬಗಳ ಕಣ್ಣೀರು