ETV Bharat / state

ಬಜೆಟ್​ ರೈತ ಸ್ನೇಹಿಯಾಗಲು ಹೇಗೆ ಸಾಧ್ಯ ?: ಸುಭಾಷ್ ಐಕೂರ - subhash Ikura outrage against central govt budget

ರೈತನ ಧರಣಿಗೆ ಕ್ಯಾರೆ ಎನ್ನದೇ ಇದೀಗ ಬಜೆಟ್ ನಲ್ಲಿ ರೈತರ ಅಭಿವೃದ್ಧಿಗೆಂದು ಹಣ ಮೀಸಲಿಡುವುದು ಒಂದು ಕೈಯಲ್ಲಿ ಮಗುವನ್ನು ಚಿವುಟಿ ಇನ್ನೊಂದು ಕೈಯಲ್ಲಿ ತೊಟ್ಟಿಲು ತೂಗಿದಂತೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಸುಭಾಷ್ ಐಕೂರ ವ್ಯಂಗ್ಯವಾಡಿದ್ದಾರೆ.

subhash-ikura
ಸುಭಾಷ್ ಐಕೂರ
author img

By

Published : Feb 1, 2021, 7:57 PM IST

ಯಾದಗಿರಿ: ಕೇಂದ್ರ ಸರ್ಕಾರವೇ ರೈತರ ವಿರೋಧಿಯಾಗಿರುವಾಗ ಇನ್ನು ಬಜೆಟ್​ ರೈತ ಸ್ನೇಹಿಯಾಗಲು ಹೇಗೆ ಸಾಧ್ಯ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಸುಭಾಷ್ ಐಕೂರ ಪ್ರಶ್ನಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕೃಷಿ ತಿದ್ದುಪಡಿ ಕಾಯ್ದೆಗಳಿಂದ ರೈತರಿಗೆ ತೊಂದರೆಯಾಗುತ್ತದೆ. ಕಳೆದ ಅನೇಕ ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ, ಸರ್ಕಾರ ಮಾತ್ರ ಅವರೊಂದಿಗೆ ಮಾತನಾಡಿಲ್ಲ. ಬದಲಿಗೆ ಬೀದಿಗಿಳಿದ ರೈತನ ಮೇಲೆಯೇ ಸರ್ಕಾರ ಗುಂಡು ಹಾರಿಸುತ್ತಿದೆ. ಮೊದಲು ಕೃಷಿ ಕಾಯ್ದೆಯನ್ನು ವಾಪಸ್ ಪಡೆಯಬೇಕು. ಅದನ್ನು ಬಿಟ್ಟು ರೈತನ ಧರಣಿಗೆ ಕ್ಯಾರೆ ಎನ್ನದೇ ಇದೀಗ ಬಜೆಟ್ ನಲ್ಲಿ ರೈತರ ಅಭಿವೃದ್ಧಿಗೆಂದು ಹಣ ಮೀಸಲಿಡುವುದು ಒಂದು ಕೈಯಲ್ಲಿ ಮಗುವನ್ನು ಚಿವುಟಿ ಇನ್ನೊಂದು ಕೈಯಲ್ಲಿ ತೊಟ್ಟಿಲು ತೂಗಿದಂತೆ ಎಂದರು.

ಓದಿ: ದೇಶದ ಇತಿಹಾಸದಲ್ಲೇ ಇಂತಹ ನಿರುತ್ಸಾಹದ ಬಜೆಟ್ ಕಂಡಿಲ್ಲ: ಡಿಕೆಶಿ

ಈ ವರ್ಷ ನಾನಾ ಕಡೆಗಳಲ್ಲಿ ಅತಿವೃಷ್ಟಿಯಿಂದ ಬೆಳೆದ ಬೆಳೆ ಕೈಗೆ ಸಿಗದಂತಾಗಿದೆ. ಸರಿಯಾಗಿ ರೈತರಿಗೆ ಪರಿಹಾರ ಬಂದಿಲ್ಲ. ಮೊದಲು ರೈತನಿಗೆ ಏನು ಬೇಕೆಂದು ಚರ್ಚೆ ಮಾಡಿ ನಿರ್ಧರಿಸಬೇಕು, ಕಾರ್ಪೊರೇಟ್ ಕುಳಗಳ ಹತ್ತಿರ ಅಲ್ಲ ಎಂದು ಕೇಂದ್ರದ ವಿರುದ್ಧ ಕಿಡಿ ಕಾರಿದರು. ತಕ್ಷಣವೇ ರೈತ ವಿರೋಧಿ ಕಾಯ್ದೆಗಳು ರದ್ದು ಮಾಡಿ, ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ. ಆಗ ನೀವು ನಮಗೆ ಸಾಲ ನೀಡಬೇಡಿ, ನಾವೇ ನಿಮಗೆ ಸಾಲ ಕೊಡುತ್ತೇವೆ ಎಂದು ಕುಟುಕಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.