ETV Bharat / state

ಹೆಚ್ಚಿನ ಅಂಕ ನೀಡುತ್ತೇನೆಂದು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಮುಖ್ಯ ಶಿಕ್ಷಕ ಬಂಧನ

ಪ್ರಾಂಶುಪಾಲ ಹಯ್ಯಾಳಪ್ಪ(Principal Hayyalppa) ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ವಸತಿ ನಿಲಯದ ವಿದ್ಯಾರ್ಥಿಗಳು ಅಧಿಕಾರಿಗಳೆದುರು ದೂರಿದ್ದಾರೆ. ಎಸ್​ಎಸ್​ಎಲ್​ಸಿಯಲ್ಲಿ ಹೆಚ್ಚಿನ ಅಂಕ ನೀಡುವ ಬಗ್ಗೆ ಆಮಿಷ ಒಡ್ಡಿ, ಸಹಕರಿಸುವಂತೆ ಈತ ಬೆದರಿಸುತ್ತಿದ್ದನಂತೆ..

sexual harassment to students by Principal in Yadagiri
ಮುಖ್ಯ ಶಿಕ್ಷಕ ಬಂಧನ
author img

By

Published : Nov 12, 2021, 9:15 PM IST

Updated : Nov 12, 2021, 9:46 PM IST

ಯಾದಗಿರಿ : ಎಸ್​ಎಸ್​ಎಲ್​ಸಿಯಲ್ಲಿ ಹೆಚ್ಚಿನ ಅಂಕಗಳನ್ನು ನೀಡುವುದಾಗಿ ಆಮಿಷ ಹಾಗೂ ಬೆದರಿಕೆ ಒಡ್ಡಿ ವಸತಿ ನಿಲಯದ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಂಡರಗಿ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ (Kittur Rani Chennamma School) ಪ್ರಭಾರ ಮುಖ್ಯ ಗುರು ಹಯ್ಯಾಳಪ್ಪನ (Principal Hayyalppa) ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕೆಲವು ದಿನಗಳ ಹಿಂದಷ್ಟೇ ವಸತಿ ನಿಲಯದಲ್ಲಿನ ಅವ್ಯವಸ್ಥೆ ಕುರಿತು ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಸರಿಯಾದ ಊಟ ಸಿಗದೆ ಕೆಲವರು ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಇದಾದ ನಂತರ ಜಿಲ್ಲಾಧಿಕಾರಿ ಡಾ. ಆರ್. ರಾಗಪ್ರಿಯಾ (District Collector Dr. R. Ragapriya) ಅವರು ಖುದ್ದಾಗಿ ಶಾಲೆಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಆಲಿಸಿದಾಗ ಪ್ರಾಂಶುಪಾಲನ ಕಾಮುಕತೆ ಬಟಾಬಯಲಾಗಿದೆ.

ಮುಖ್ಯ ಶಿಕ್ಷಕ ಬಂಧನ

ಪ್ರಾಂಶುಪಾಲ ಹಯ್ಯಾಳಪ್ಪ ಲೈಂಗಿಕ ಕಿರುಕುಳ(Sexual harassment) ನೀಡುತ್ತಿರುವ ಬಗ್ಗೆ ವಸತಿ ನಿಲಯದ ವಿದ್ಯಾರ್ಥಿಗಳು ಅಧಿಕಾರಿಗಳೆದುರು ದೂರಿದ್ದಾರೆ. ಎಸ್​ಎಸ್​ಎಲ್​ಸಿಯಲ್ಲಿ ಹೆಚ್ಚಿನ ಅಂಕ ನೀಡುವ ಬಗ್ಗೆ ಆಮಿಷ ಒಡ್ಡಿ, ಸಹಕರಿಸುವಂತೆ ಬೆದರಿಸುತ್ತಿದ್ದನಂತೆ.

ವಿದ್ಯಾರ್ಥಿಗಳ ಅಳಲು ಆಲಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಪ್ರಾಂಶುಪಾಲನ ವಿರುದ್ಧ ದೂರು ದಾಖಲಿಸುವಂತೆ ಸೂಚಿಸಿದ್ದರು. ಅದರಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ(Pocso Act) ಪ್ರಕರಣ ದಾಖಲಿಸಿದ್ದು, ಆತನನ್ನು ಬಂಧಿಸಿದ್ದಾರೆ.

ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಪ್ರಭಾರ ಮುಖ್ಯಗುರು ಹಯ್ಯಾಳಪ್ಪ ವಿಪರೀತ ಕಾಟ ಕೊಡುತ್ತಿದ್ದನಂತೆ, ಅಂಕಗಳನ್ನು ಕೊಡುವ ನೆಪದಲ್ಲಿ ತನ್ನೊಂದಿಗೆ ಲೈಂಗಿಕವಾಗಿ ನಡೆದುಕೊಳ್ಳುವಂತೆ ವಿದ್ಯಾರ್ಥಿನಿಯರಿಗೆ ಪೀಡಿಸುತ್ತಿದ್ದನಂತೆ. ಈತನ ಮಾತು ಕೇಳದಿರುವವರಿಗೆ ಕಾಟ ಕೊಡುತ್ತಿದ್ದನಂತೆ, ವಿರೋಧಿಸಿದ ವಿದ್ಯಾರ್ಥಿಗಳು ಒಂದೊತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣ ಮಾಡುತ್ತಿದ್ದನಂತೆ.

Last Updated : Nov 12, 2021, 9:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.