ಯಾದಗಿರಿ: ಜಿಲ್ಲೆಯಲ್ಲಿಂದು ಮತ್ತೆ 7 ವರ್ಷದ ಬಾಲಕ ಸೇರಿ ಒಟ್ಟು 14 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಹುಣಸಗಿ ತಾಲೂಕಿನ ಬ್ಯಾಲದಗಿಡ ತಾಂಡಾದ 90 ವರ್ಷದ ಪುರುಷ (ಪಿ-18392), ಬ್ಯಾಲದಗಿಡ ತಾಂಡಾದ 19 ವರ್ಷದ ಯುವತಿ (ಪಿ-18393), ತಾಲೂಕಿನ ಅಚ್ಚೋಲಾ ಗ್ರಾಮದ 25 ವರ್ಷದ ಪುರುಷ (ಪಿ-18394), ಅಚ್ಚೋಲಾ ಗ್ರಾಮದ 22 ವರ್ಷದ ಮಹಿಳೆ (ಪಿ-18395), ತಾಲೂಕಿನ ಅಬ್ಬೆತುಮಕೂರ ಗ್ರಾಮದ 35 ವರ್ಷದ ಪುರುಷ (ಪಿ-18396), ಗುರುಮಠಕಲ್ ತಾಲೂಕಿನ ಅನಪೂರ ಗ್ರಾಮದ 32 ವರ್ಷದ ಪುರುಷ (ಪಿ-18397), ಅನಪೂರ ಗ್ರಾಮದ 28 ವರ್ಷದ ಮಹಿಳೆ (ಪಿ-18398), ಶಹಾಪುರ ತಾಲೂಕಿನ ಕರಣಗಿ ಗ್ರಾಮದ 7 ವರ್ಷದ ಬಾಲಕ (ಪಿ-18399), ಅನಪೂರ ಗ್ರಾಮದ 40 ವರ್ಷದ ಪುರುಷ (ಪಿ-18400), ಕರಣಗಿ ಗ್ರಾಮದ 60 ವರ್ಷದ ಪುರುಷ (ಪಿ-18401).
ಇನ್ನು ಅಬ್ಬೆತುಮಕೂರ ಗ್ರಾಮದ 70 ವರ್ಷದ ಪುರುಷ (ಪಿ-18402), ಸುರಪುರ ತಾಲೂಕಿನ ದಿವಳಗುಡ್ಡದ 37 ವರ್ಷದ ಮಹಿಳೆ (ಪಿ-18403), ದಿವಳಗುಡ್ಡದ 19 ವರ್ಷದ ಯುವಕ (ಪಿ-18404), ಸುರಪುರ ಬಸ್ ಡಿಪೋದ 44 ವರ್ಷದ ಪುರುಷ (ಪಿ-18405) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಸೋಂಕಿತರನ್ನು ಚಿಕಿತ್ಸೆಗಾಗಿ ಜಿಲ್ಲೆಯ ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 970 ಪ್ರಕರಣಗಳ ಪೈಕಿ 855 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ.