ಯಾದಗಿರಿ: ಗಂಡಸ್ತನದ ಬಗ್ಗೆ ಮಾತಾಡುವ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಅವರು ಕನಕಪುರದಲ್ಲಿ ಡಿ ಕೆ ಶಿವಕುಮಾರ್ ಅವರ ವಿರುದ್ಧ ಚುನಾವಣೆಗೆ ನಿಂತು ಗೆದ್ದು ಬರಲಿ, ಅವರ ಪೌರುಷವನ್ನು ಅಲ್ಲಿ ತೋರಿಸಲಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸವಾಲ್ ಹಾಕಿದ್ದಾರೆ.
ಭೀಮರಾಯನಗುಡಿ ಕೃಷಿ ಮಹಾವಿದ್ಯಾಲದಲ್ಲಿ ನಡೆದ 4.11 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಯರ ನಿಲಯ ನಿರ್ಮಾಣ ಶಂಕುಸ್ಥಾಪನೆ ನಂತರ ಮಾಧ್ಯಮದೊಂದಿಗೆ ಮಾತನಾಡುವಾಗ, ಗಂಡಸ್ತನದ ಬಗ್ಗೆ ಮಾತಾಡಿರುವ ಸಚಿವ ಅಶ್ವತ್ಥ್ ನಾರಾಯಣ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಇದನ್ನೂ ಓದಿ: 'ಕಾಂಗ್ರೆಸ್ ನಾಯಕರಿಗೆ ತಪ್ಪಿನ ಅರಿವಾಗಿದೆ, ಪಾದಯಾತ್ರೆ ಕೈಬಿಟ್ಟಿರುವುದು ಸಂತೋಷ'
ಅದು ಅಭಿವೃದ್ಧಿಕಾರ್ಯ ಕುರಿತ ಸಭೆಯಾಗಿತ್ತು. ಅದು ಎಲ್ಲರಿಗೂ ಸಂಬಂಧಿಸಿದ್ದು, ಆ ವೇಳೆ ಅಂಥಹ ವೇದಿಕೆಯಲ್ಲಿ ಅಸಂಬದ್ಧವಾಗಿ ಮಾತನಾಡುವದು ಸರಿಯಲ್ಲ. ಬೇಕಿದ್ರೆ ಡಿ ಕೆ ಶಿವಕುಮಾರ್ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ ನೋಡುವ ಎಂದರು. ವೇದಿಕೆ ಮೇಲೆ ಸಂಸದ ಡಿ ಕೆ ಸುರೇಶ್ ಅವರು ತಕ್ಕ ಉತ್ತರ ನೀಡಿದ್ದಾರೆ. ಅಶ್ವತ್ಥ್ ನಾರಾಯಣ ಅವರಿಗೆ ಅಧಿಕಾರವಿದೆ ಎಂದು ಏನೇನೋ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.