ETV Bharat / state

ಉದ್ದೇಶಿತ ನೂತನ ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರಿಡಿ: ಸುರಪುರ ನಾಯಕ ಸಂಘ ಮನವಿ

ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು ರಾಮಾಯಣ ಕರ್ತೃ ಶ್ರೀ ಮಹರ್ಷಿ ವಾಲ್ಮೀಕಿ ಎಂದು ನಾಮಕರಣ ಮಾಡಬೇಕೆಂದು ಮನವಿ ಮಾಡಲಾಗಿದೆ.

ನೂತನ ವಿವಿಗೆ ಮಹರ್ಷಿ ವಾಲ್ಮೀಕಿ ಎಂದು ಹೆಸರಿಡಬೇಕೆಂದು ಮನವಿ

author img

By

Published : May 22, 2020, 7:13 PM IST

ಸುರಪುರ(ಯಾದಗಿರಿ): ರಾಜ್ಯದಲ್ಲಿ ಹೊಸದಾಗಿ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು, ಈ ವಿವಿಗೆ ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿಯ ಹೆಸರು ಇಡಬೇಕು ಎಂದು ಹುಣಸಗಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಸದಸ್ಯರು ಉಪ ತಹಶಿಲ್ದಾರ್​ ಕಕ್ಕೇರಾ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

ನೂತನ ವಿವಿಗೆ ಮಹರ್ಷಿ ವಾಲ್ಮೀಕಿ ಎಂದು ಹೆಸರಿಡಬೇಕೆಂದು ಮನವಿ
ನೂತನ ವಿವಿಗೆ ಮಹರ್ಷಿ ವಾಲ್ಮೀಕಿ ಎಂದು ಹೆಸರಿಡಬೇಕೆಂದು ಮನವಿ

ಸಂಘದ ತಾಲೂಕು ಅಧ್ಯಕ್ಷ ಬಸಣ್ಣ ಜೀರಾಳ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ವಾಲ್ಮೀಕಿ ಜನಾಂಗ ತಮ್ಮ ಪ್ರಾಣವನ್ನೇ ನೀಡಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ನೂತನ ವಿವಿಗೆ ಮಹಾನ್​ ಪುರುಷ ವಾಲ್ಮೀಕಿ ಅವರ ಹೆಸರಿಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಸಂಘದ ಗೌರವಾಧ್ಯಕ್ಷ ಹಣಮಂತ್ರಾಯ, ಮುಖಂಡರಾದ ವೀರಭದ್ರಪ್ಪ, ಮದನಪ್ಪ, ಹಣಮಂತ್ರಾಯ, ಬಸವರಾಜ ಸೇರಿದಂತೆ ಹಲವರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.