ETV Bharat / state

ಮುಂಬೈಯಿಂದ ಬಂದಿದ್ದ ಮಹಿಳೆಯರಿಂದ ಸ್ವಗ್ರಾಮಕ್ಕೆ ತೆರಳಲು ಹರಸಾಹಸ - yadagiri latest news

ವಲಸೆ ಕುಲಿ ಕಾರ್ಮಿಕರು ತಮ್ಮ ಸ್ವಗ್ರಾಮಕ್ಕೆ ತೆರಳಲು ಕೇಂದ್ರ ಸರ್ಕಾರ ಅನುಮತಿ ಮಾಡಿಕೊಟ್ಟಿದೆ. ಆದ್ರೆ, ವಾಪಸ್ ಹೋಗಲು ಜಿಲ್ಲಾಡಳಿತದ ಅನುಮತಿ ಬೇಕಿರುವುದರಿಂದ ಮಹಿಳೆಯರು ಕಳೆದೊಂದು ವಾರದಿಂದ ಜಿಲ್ಲಾಧಿಕಾರಿ ಕಚೇರಿಗೆ ಅಲೆಯುತ್ತಿದ್ದಾರೆ.

Problem to migrant women for Going to their native place
ಮುಂಬಯಿಂದ ಬಂದಿದ್ದ ಮಹಿಳೆಯರು
author img

By

Published : May 8, 2020, 7:07 PM IST

ಯಾದಗಿರಿ : ಕಳೆದ ಒಂದೂವರೆ ತಿಂಗಳ ಹಿಂದೆ ಮುಂಬೈಯಿಂದ ಬಂದ ವಲಸೆ ಕೂಲಿ ಕಾರ್ಮಿಕ ಮಹಿಳೆಯರು ವಾಪಸ್ ತಮ್ಮ ತವರೂರಿಗೆ ಹೋಗಲು ಕಷ್ಟಪಡುತ್ತಿದ್ದಾರೆ.

ಲಾಕ್ ಡೌನ್​ ಹಿನ್ನೆಲೆಯಲ್ಲಿ ಮುಂಬಯಿಗೆ ತೆರಳಲಾಗದೆ ಯಾದಗಿರಿಯಲ್ಲೇ ಉಳಿಯುವಂತಾಗಿ ತುತ್ತು ಅನ್ನಕ್ಕೂ ಪರದಾಡುವಂತಾಗಿತ್ತು. ಇನ್ನು ವಲಸೆ ಕೂಲಿ ಕಾರ್ಮಿಕರು ತಮ್ಮ ಸ್ವಗ್ರಾಮಕ್ಕೆ ತೆರಳಲು ಕೇಂದ್ರ ಸರ್ಕಾರ ಅನುಮತಿ ಮಾಡಿಕೊಟ್ಟಿದ್ದು, ವಾಪಸ್ ಹೋಗಲು ಜಿಲ್ಲಾಡಳಿತದ ಅನುಮತಿ ಬೇಕಿರುವುದರಿಂದ ಈ ಮಹಿಳೆಯರು ಕಳೆದ ಒಂದು ವಾರದಿಂದ ಜಿಲ್ಲಾಧಿಕಾರಿ ಕಚೇರಿಗೆ ಅಲೆಯುತ್ತಿದ್ದಾರೆ.

ಕಳೆದ ಮಾರ್ಚ್​ 22 ರಂದು ಮುಂಬಯಿಯಿಂದ ಜಿಲ್ಲೆಯ ಏಗಾಪುರ ಬಾಂಬ್ಲಾ ತಾಂಡಕ್ಕೆ ಬಂದಿದ್ದರು. ಈ ಮಹಿಳೆಯರು ಅನಕ್ಷರಸ್ಥರಾಗಿರುವುದರಿಂದ ತಮ್ಮ ಗ್ರಾಮಗಳಿಗೆ ಹೋಗುವ ಸಂಬಂಧ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ತಿಳಿಯುತ್ತಿಲ್ಲ. ಈ ಕಾರಣದಿಂದ ಜಿಲ್ಲಾಡಳಿತ ಗಮನಹರಿಸಿ ತಮ್ಮನ್ನು ಸ್ವಗ್ರಾಮಕ್ಕೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.