ETV Bharat / state

ಸುರಪುರ: ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ - ಸುರಪುರ ನಗರದ ಕುಂಬಾರಪೇಟೆ

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸೂಲಪ್ಪನಿಗಾಗಿ ಮನೆಯವರು ನಿರಂತರವಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದರು. ಆದರೆ ಎಲ್ಲಿಯೂ ಪತ್ತೆಯಾಗಿರಲಿಲ್ಲ.

Dead
Dead
author img

By

Published : Apr 14, 2021, 10:35 PM IST

ಯಾದಗಿರಿ: ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಸುರಪುರ ನಗರದ ಕುಂಬಾರಪೇಟೆಯ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಕುಂಬಾರಪೇಟೆ ನಿವಾಸಿಯಾದ ಸೂಲಪ್ಪ ಮಂಗ್ಯಾಳ ಎಂಬ 30 ವರ್ಷದ ವ್ಯಕ್ತಿ ಶವವಾಗಿ ಪತ್ತೆಯಾದವ. ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ. ಇಂದು ಕುಂಬಾರಪೇಟೆಯ ಹೊರವಲಯದಲ್ಲಿರುವ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಸೂಲಪ್ಪನಿಗೆ ಮಾತು ಬರುತ್ತಿರಲಿಲ್ಲ ಹಾಗೂ ಬುದ್ಧಿಮಾಂದ್ಯನಾಗಿದ್ದ ಎಂದು ಹೇಳಲಾಗುತ್ತಿದೆ. ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸೂಲಪ್ಪನಿಗಾಗಿ ಮನೆಯವರು ನಿರಂತರವಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದರು. ಆದರೆ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಬಾವಿಯ ಕಡೆಗೆ ಹೋದವರು ಶವವನ್ನು ಕಂಡು ವಿಷಯ ತಿಳಿಸಿದಾಗ ಸೂಲಪ್ಪನ ಮನೆಯವರು ಬಂದು ನೋಡಿದಾಗ ಕಾಣೆಯಾದ ಸೂಲಪ್ಪನ ಶವ ಎಂದು ಗುರುತಿಸಲಾಗಿದೆ.

ವಿಷಯ ತಿಳಿದು ಬಾವಿಯ ಬಳಿಗೆ ಆಗಮಿಸಿದ ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.