ಗುರುಮಠಕಲ್ : ಲಾಕ್ಡೌನಿಂದ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಿಗೆ ತಾಲೂಕಿನ ಕೇಶವಾರ ಹಾಗೂ ಪುಟ್ಪಾಕ್ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನೂರಾರು ಕಾರ್ಮಿಕರಿಗೆ ಸರ್ಕಾರ ಕೆಲಸ ಒದಗಿಸಿದೆ.
ಗ್ರಾಮದ ರಸ್ತೆಗಳು, ಚರಂಡಿ, ಕೆರೆ ಹೂಳೆತ್ತುವುದು, ಬದು ನಿರ್ಮಾಣ, ಬಾವಿ ಕೊರೆಯುವ ಕೆಲಸಗಳು ಬಿಡುವಿಲ್ಲದೆ ನಡೆಯುತ್ತಿವೆ. ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 50 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಕೆಲಸಗಳನ್ನು ಕೈಗೊಳ್ಳಲಾಗಿದೆ. ದಿನವೊಂದಕ್ಕೆ 275 ರೂಪಾಯಿಯಂತೆ ಕೂಲಿ ನೀಡಲಾಗುತ್ತಿದೆ. ವಾರಕ್ಕೊಮ್ಮೆ ಕಾರ್ಮಿಕರಿಗೆ ದುಡಿಮೆಯ ಹಣ ನೀಡಲಾಗುತ್ತೆ.
ಈ ಹಿಂದೆ ಕೂಡ ಪ್ಲೇಗ್ನಂತಹ ಕಾಯಿಲೆ ಬಂದಾಗ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಆ ವೇಳೆ ಅಂದಿನ ಪ್ರಧಾನಿ ಕೂಡ ಬಡವರು, ನಿರ್ಗತಿಕರಿಗೆ ಉದ್ಯೋಗ ನೀಡಿ ನೆರವಾಗಿದ್ದರು. ಈಗ ಮತ್ತೊಮ್ಮೆ ಆ ದಿನವನ್ನು ನೆನಿಪಿಸುವಂತಾಗಿದೆ.