ಯಾದಗಿರಿ: ರಾಜ್ಯದ ನೂತನ ಮುಖ್ಯಮಂತ್ರಿ ಬಿಎಸ್ವೈ ವಿರುದ್ಧ ಶಾಸಕ ನಾಗಣ್ಣಗೌಡ ಕಂದಕೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಜಿಡಿಎಸ್ ಕಚೇರಿಯಲ್ಲಿ ಮಾತನಾಡಿದ ಗುರಮಿಠಕಲ್ ವಿಧಾನಸಭಾ ಕ್ಷೇತ್ರದ ಶಾಸಕ ನಾಗಣ್ಣಗೌಡ ಕಂದಕೂರ, ಸಿಎಂ ಯಡಿಯೂರಪ್ಪಗೆ ಗಟ್ಸ್ ಇಲ್ಲ. ಸಂತ್ರಸ್ತರ ಪರವಾಗಿ ಕೇಂದ್ರದಿಂದ ಹಣ ತರಲು ಆಗುತ್ತಿಲ್ಲ. ಪಿಎಂ ಮೋದಿ ಹಾಗೂ ಶಾ ಎದುರು ನಿಂತು ಮಾತನಾಡಲು ಗಟ್ಸ್ ಇಲ್ಲ ಎಂದು ಹರಿಹಾಯ್ದಿದ್ದಾರೆ.
ಯಡಿಯೂರಪ್ಪ ಬಹಳ ದಿನಗಳವರೆಗೆ ಸಿಎಂ ಆಗಿ ಉಳಿಯುವುದಿಲ್ಲ. ಅವರು ಹೆಣ್ಣು ಹುಲಿ ಎಂದು ಕಿಚಾಯಿಸಿದರು.