ಸುರಪುರ (ಯಾದಗಿರಿ): ಅನೈತಿಕ ಸಂಬಂಧ ಹೊಂದಿದ್ದ ಆರೋಪ ಹೊರಿಸಿ ವ್ಯಕ್ತಿಯೊಬ್ಬನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ತಾಲೂಕಿನ ದೇವಿಕೆರಾ ಗ್ರಾಮದಲ್ಲಿ ನಡೆದಿದೆ.
ಯಂಕಪ್ಪ ತಂದೆ ಭೀಮಣ್ಣ ಬೇವಿನಗಿಡ (35) ಕೊಲೆಯಾದ ವ್ಯಕ್ತಿ. ಯಂಕಪ್ಪ ಮಂಗಳವಾರ ರಾತ್ರಿ ಮನೆಯ ಛಾವಣಿ ಮೇಲೆ ಮಲಗಿದ್ದ. ಈ ವೇಳೆ ರಾತ್ರಿ ಸುಮಾರು 12 ಗಂಟೆಗೆ ಅಲ್ಲಿಗೆ ಆಗಮಿಸಿದ ಶಿವಪ್ಪ, ಆತನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಠಾಣೆಗೆ ಬಂದು ಶರಣಾಗಿದ್ದಾನೆ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸುರಪುರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.