ETV Bharat / state

ಯಾದಗಿರಿಯಲ್ಲಿ ಜನರಿಂದ ಬೌದ್ಧ ಧರ್ಮ ಸ್ವೀಕಾರ.. ಅಂಬೇಡ್ಕರ್​ ಮೊಮ್ಮಗಳಿಂದ ಸಮಾರಂಭಕ್ಕೆ ಚಾಲನೆ

author img

By

Published : Oct 15, 2022, 3:59 PM IST

Updated : Oct 15, 2022, 5:51 PM IST

ಬಾಬಾಸಾಹೇಬ್​ ಅಂಬೇಡ್ಕರ್ ಅವರ 66ನೇ ಧಮ್ಮ ಚಕ್ರ ಪ್ರವರ್ತನಾ ದಿನದ ಅಂಗವಾಗಿ ಯಾದಗಿರಿ ಜಿಲ್ಲೆಯಲ್ಲಿ 350ಕ್ಕೂ ಹೆಚ್ಚು ಜನ ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದರು.

more-than-350-people-converted-to-buddhism-in-yadagiri
350ಕ್ಕೂ ಹೆಚ್ಚು ಜನರಿಂದ ಬೌದ್ಧ ಧರ್ಮ ಸ್ವೀಕಾರ: ಸಮಾರಂಭಕ್ಕೆ ರಮಾತಾಯಿ ಚಾಲನೆ

ಯಾದಗಿರಿ : ಬಾಬಾಸಾಹೇಬ್​ ಅಂಬೇಡ್ಕರ್ ಅವರ 66ನೇ ಧಮ್ಮ ಚಕ್ರ ಪ್ರವರ್ತನಾ ದಿನದ ನಿಮಿತ್ತ ಹಮ್ಮಿಕೊಂಡಿದ್ದ ಬೌದ್ಧ ಧಮ್ಮ ದೀಕ್ಷಾ ಸಮಾರಂಭದಲ್ಲಿ ಸುಮಾರು 350ಕ್ಕೂ ಹೆಚ್ಚು ಜನರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ನಗರದ ಗೋಲ್ಡನ್‌ಕೇವ್ ಬುದ್ಧವಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಬಾಸಾಹೇಬರ ಮೊಮ್ಮಗಳು ರಮಾತಾಯಿ ಹಾಗೂ 14 ಬೌದ್ಧ ಭಿಕ್ಕುಗಳ ಸಮ್ಮುಖದಲ್ಲಿ ಹಿಂದು ಧರ್ಮ ತೊರೆದು ಬೌದ್ಧ ಧಮ್ಮ ದೀಕ್ಷಾ ಸ್ವೀಕರಿಸಿದರು.

350ಕ್ಕೂ ಹೆಚ್ಚು ಜನರಿಂದ ಬೌದ್ಧಧರ್ಮ ಸ್ವೀಕಾರ : ಬೌದ್ಧ ಧಮ್ಮ ದೀಕ್ಷಾ ಸಮಾರಂಭಕ್ಕೂ ಮುನ್ನ ಬಾಬಾಸಾಹೇಬ ಅಂಬೇಡ್ಕರ್ ಮೊಮ್ಮಗಳು ರಮಾತಾಯಿ ಅವರನ್ನು ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಿಂದ ಅಂಬೇಡ್ಕರ್ ವೃತ್ತ, ಗಾಂಧೀಜಿ ವೃತ್ತ ಮಾರ್ಗವಾಗಿ ಬುದ್ಧವಿಹಾರದವರೆಗೆ ಸಾರೋಟದಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು.

ಅಂಬೇಡ್ಕರ್​ ಮೊಮ್ಮಗಳು ರಮಾತಾಯಿ ಭಾಗಿ : ಯಾದಗಿರಿ, ಕಲಬುರಗಿ, ಬೀದರ್, ರಾಯಚೂರು, ಬಳ್ಳಾರಿ, ಹೊಸಪೇಟೆ, ಬಿಜಾಪುರ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬುದ್ಧನ ಅನುಯಾಯಿಗಳು ಆಗಮಿಸಿದ್ದರು. ಬೌದ್ಧ ಧಮ್ಮ ದೀಕ್ಷಾ ಸಮಾರಂಭಕ್ಕೆ ರಮಾತಾಯಿ ಹಾಗೂ ವರಜ್ಯೋತಿ ಭಂತೇಜಿ ಬೌದ್ಧ ಪ್ರತಿಮೆಗೆ ಮೊಂಬತ್ತಿ ಬೆಳಗುವ ಮೂಲಕ ಚಾಲನೆ ನೀಡಿದರು.

ಯಾದಗಿರಿಯಲ್ಲಿ ಜನರಿಂದ ಬೌದ್ಧ ಧರ್ಮ ಸ್ವೀಕಾರ.. ಅಂಬೇಡ್ಕರ್​ ಮೊಮ್ಮಗಳಿಂದ ಸಮಾರಂಭಕ್ಕೆ ಚಾಲನೆ

ಅಂಬೇಡ್ಕರ್ ಪ್ರತಿಪಾದಿಸಿದ 22 ಪ್ರತಿಜ್ಞಾ ವಿಧಿ ಬೋಧನೆ : ಮೈಸೂರು, ಬೆಂಗಳೂರು, ಬೀದರ್, ಅಣದೂರು, ಸಿಂದಗಿ, ಶಹಾಪುರ, ಕಲಬುರಗಿಯಿಂದ ಒಟ್ಟು 14 ಜನ ಭಿಕ್ಕು ಸಂಘದವರು ಆಗಮಿಸಿದ್ದರು. ಸಮಾರಂಭದ ಸಾನಿಧ್ಯ ವಹಿಸಿದ್ದ ವರಜ್ಯೋತಿ ಭಂತೆಜೀ ನೇತೃತ್ವದಲ್ಲಿ ಈ ಭಿಕ್ಕುಗಳು ಸಮಾರು 350ಕ್ಕೂ ಹೆಚ್ಚು ಜನರಿಗೆ ತ್ರಿಸರಣ ಪಂಚಶೀಲ, ಅಷ್ಟಾಂಗ ಮಾರ್ಗ ಮತ್ತು ಅಂಬೇಡ್ಕರ್ ಪ್ರತಿಪಾದಿಸಿದ 22 ಪ್ರತಿಜ್ಞಾ ವಿಧಿಗಳ ಸಂದೇಶ ಬೋಧಿಸಿ ಬೌದ್ಧ ಧಮ್ಮ ದೀಕ್ಷೆ ನೀಡಿದರು. ಈ ಮೂಲಕ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರೂ ಬೌದ್ಧ ಧರ್ಮದ ಪ್ರತಿವಿಜ್ಞಾವಿಧಿಯನ್ನು ಸ್ವೀಕರಿಸಿದರು.

ಇದನ್ನೂ ಓದಿ :ಕೋಡಿ ಬಿದ್ದ ಅಣಜಿ ಕೆರೆ.. ಜಗಳೂರು-ದಾವಣಗೆರೆ ರಸ್ತೆ ಬಂದ್, ಮಾರ್ಗ ಬದಲಾವಣೆ

Last Updated : Oct 15, 2022, 5:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.