ಸುರಪುರ(ಯಾದಗಿರಿ): ಗುಜರಾತ್ನ ಅಹಮದಾಬಾದ್ನಿಂದ ಬಂದ ದಂಪತಿಯಲ್ಲಿ ಕೊರೊರಾ ಪಾಸಿಟಿವ್ ಕಂಡುಬಂದ ಹಿನ್ನೆಲೆ ಇಂದು ನಗರದ ಆಸರ ಮೊಹಲ್ಲಾಗೆ ಶಾಸಕ ನರಸಿಂಹ ನಾಯಕ ರಾಜುಗೌಡ ಭೇಟಿ ನೀಡಿದ್ದರು.
ಆಸರ ಮೊಹಲ್ಲಾದ ಜನರನ್ನುದ್ದೇಶಿಸಿ ಮಾತನಾಡಿದ ಶಾಸಕರು ಯಾರೂ ಆತಂಕ ಪಡುವ ಅಗತ್ಯವಿಲ್ಲ. ಕೊರೊನಾ ಸೊಂಕಿತರನ್ನು ಈಗಾಗಲೇ ಚಿಕಿತ್ಸೆಗೆ ಕಳಿಸಲಾಗಿದೆ. ನೀವೆಲ್ಲರೂ ತಪ್ಪದೆ ಮಾಸ್ಕ್ ಧರಿಸಿ. ಅನಾವಶ್ಯಕವಾಗಿ ಹೊರಗೆ ಬರಬೇಡಿ, ಆಗಾಗ್ಗೆ ನಿಮ್ಮ ಕೈಗಳನ್ನು ತೊಳೆಯುತ್ತಿರಿ ಎಂದು ಸೂಚಿಸಿದರು. ಆಸರ ಮೊಹಲ್ಲಾದ ಸೋಂಕಿತರ ಮನೆ ಸುತ್ತಮುತ್ತ ಸುಮಾರು 100 ಮೀಟರ್ವರೆಗೂ ಸೀಲ್ಡೌನ್ ಇರಲಿದೆ. ಆದ್ದರಿಂದ ಸಾರ್ವಜನಿಕರು ಹೊರಗೆ ಬರದೆ ಸಹಕರಿಸುವಂತೆ ಮನವಿ ಮಾಡಿದರು. ಅಲ್ಲದೆ ಸೀಲ್‌ಡೌನ್‌ಗೆ ಒಳಗಾದ ಜನರಿಗೆ ಯಾವುದೇ ಅಗತ್ಯ ವಸ್ತುಗಳ ಕೊರತೆಯಾಗದಂತೆ ನೋಡಿಕೊಳ್ಳಲು ತಾಲೂಕು ಆಡಳಿತಾಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ, ತಹಶೀಲ್ದಾರ್ ನಿಂಗಣ್ಣ ಬಿರಾದಾರ್, ಪಿಐ ಸಾಹೇಬ್‌ಗೌಡ ಪಾಟೀಲ್, ನಗರಸಭೆ ಪೌರಾಯುಕ್ತ ಜೀವನ್ ಕುಮಾರ್ ಕಟ್ಟಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.