ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಗೋಗಿಕೇರಾ ವಾರ್ಡ್ನಲ್ಲಿ ವೃದ್ಧೆಯೊಬ್ಬರು ಕಳೆದ ಐದು ವರ್ಷಗಳಿಂದ ಗುಡಿಸಲಿನಲ್ಲೇ ಯಾವುದೇ ಆಧಾರವಿಲ್ಲದೆ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ಅವರ ಸಂಕಷ್ಟದ ಕುರಿತು ಕುರಿತಂತೆ ನಮ್ಮ 'ಈಟಿವಿ ಭಾರತ'ನಲ್ಲಿ ಪ್ರಕಟಿಸಿದ್ದ ಎರಡು ವಿಸ್ತೃತ ವರದಿಗಳಿಗೆ ಸುರಪುರ ಶಾಸಕರು ಸ್ಪಂದಿಸಿದ್ದಾರೆ.
ಸುರಪುರ ಗೋಗಿಕೇರಾ ವಾರ್ಡ್ನಲ್ಲಿ ಕಳೆದ ಐದು ವರ್ಷಗಳಿಂದ ಕೇವಲ ನಾಲ್ಕು ಅಡಿ ಸುತ್ತಳತೆಯ ಗುಡಿಸಲಲ್ಲಿ ವೃದ್ಧೆ ಗುರುಬಾಯಿ ವಾಸವಾಗಿದ್ದು, ಹಳೇ ಕಬ್ಬಿಣ, ಪ್ಲಾಸ್ಟಿಕ್ ಸೇರಿದಂತೆ ಮತ್ತಿತರೆ ಹಳೇ ವಸ್ತುಗಳನ್ನು ಆಯ್ದು, ಅವುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಮಳೆ, ಗಾಳಿ ಏನೆ ಆದ್ರೂ ಅಜ್ಜಿ ಇದೇ ಮನೆಯಲ್ಲಿ ಇರಬೇಕಾಗಿರುವುದರಿಂದ ಬದುಕು ದುಸ್ತರವಾಗಿದೆ.
5 ವರ್ಷಗಳಿಂದ ಗುಡಿಸಲಿನಲ್ಲೇ ವೃದ್ಧೆಯ ವಾಸ... ಈಗ ಒಪ್ಪೊತ್ತಿನ ಊಟಕ್ಕೂ ಪರದಾಟ
ಈ ಕುರಿತಂತೆ ಈಟಿವಿ ಭಾರತ '5 ವರ್ಷಗಳಿಂದ ಗುಡಿಸಲಲ್ಲಿ ವಾಸ; ವೃದ್ಧೆಗೆ ಯಾರೂ ಆಧಾರವಿಲ್ಲ, ಆಧಾರ್ ಕಾರ್ಡೂ ಇಲ್ಲ' ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಶಾಸಕ ನರಸಿಂಹ ನಾಯಕ ರಾಜುಗೌಡ, ವೃದ್ಧೆಗೆ 20 ವರ್ಷಗಳ ಹಿಂದೆ ಮಂಜೂರಾಗಿದ್ದ ಮನೆ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ. ಟೀಂ ರಾಜುಗೌಡ ಸೇವಾ ಸಮಿತಿಯ ಕಾರ್ಯಕರ್ತರೇ ಸ್ಥಳದಲ್ಲಿ ಬೀಡು ಬಿಟ್ಟು ವೃದ್ಧೆಯ ಮನೆ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ. ಅವರ ಈ ಕಾರ್ಯಕ್ಕೆ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ.
5 ವರ್ಷಗಳಿಂದ ಗುಡಿಸಲಲ್ಲಿ ವಾಸ; ವೃದ್ಧೆಗೆ ಯಾರೂ ಆಧಾರವಿಲ್ಲ, ಆಧಾರ್ ಕಾರ್ಡೂ ಇಲ್ಲ !
ಇನ್ನೆರಡು ದಿನಗಳಲ್ಲಿ ಮನೆ ಸಿದ್ಧವಾಗಲಿದೆ. ನನಗೊಂದು ಸ್ವಂತ ಸೂರು ಸಿಗಲಿದೆ ಎಂದು ವೃದ್ಧೆ ಗುರುಬಾಯಿ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತನ್ನ ನೆರವಿಗೆ ಧಾವಿಸಿದ ಶಾಸಕರಿಗೆ ಧನ್ಯವಾದ ಹೇಳಿದ್ದಾರೆ.
ಒಟ್ಟಾರೆ ಈಟಿವಿ ಭಾರತ ವರದಿಗೆ ಸ್ಪಂದಿಸಿ ವೃದ್ಧೆಯ ನೆರವಿಗೆ ಧಾವಿಸಿರುವ ಶಾಸಕ ರಾಜುಗೌಡ ಮತ್ತು ಟೀಂ ರಾಜುಗೌಡ ಸಮಿತಿಯ ಸದಸ್ಯರಿಗೆ ಧನ್ಯವಾದ ತಿಳಿಸುತ್ತೇವೆ.