ಯಾದಗಿರಿ : ಕಾಂಗ್ರೆಸ್ ಪಕ್ಷ ಈಗ ಭಾರತೀಯ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ. ಈಗ ಅದು ಪಾಕಿಸ್ತಾನದ ರಾಷ್ಟ್ರೀಯ ಪಕ್ಷವಾಗಿದೆ ಅಂತಾ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶ ವಿರೋಧಿ ಚಟುವಟಿಕೆ ಮಾಡುವಂತಹ ಯಾವುದೇ ಸಂಘಟನೆಗಳಿದ್ರೂ ಅವುಗಳನ್ನು ನಿಷೇಧ ಮಾಡಬೇಕು. ಗುಪ್ತಚರ ಇಲಾಖೆ ಚುರುಕುಗೊಳಿಸುವ ಮೂಲಕ ಅಂತಹ ಸಂಘಟನೆಗಳ ಮೇಲೆ ತೀವ್ರ ನಿಗಾ ಇಡಬೇಕು ಅಂತಾ ತಿಳಿಸಿದ್ರು. ದೇಶ ವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ರಾಜಕೀಯ ನಾಯಕರ ಮೇಲೂ ನಿಗಾ ಇಡಬೇಕು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ದೇಶ ಬೇಕಾಗಿಲ್ಲ. ತಮ್ಮ ವೋಟ್ ಬ್ಯಾಂಕ್ಗಾಗಿ ದೇಶ ಮಾರಾಟ ಮಾಡಿದ್ರೂ ಪರವಾಗಿಲ್ಲ ಎನ್ನುವ ಧೋರಣೆ, ಸಂಸ್ಕೃತಿ ಈ ಪಕ್ಷಗಳದ್ದಾಗಿದೆ ಅಂತಾ ಯತ್ನಾಳ್ ಕಿಡಿ ಕಾರಿದ್ರು.
SDPI ,PFI ಸಂಘಟನೆಗಳು ದೇಶ ಸೇವೆ ಮಾಡಲ್ಲ, ಅವರು ಪಾಕಿಸ್ತಾನದ ಏಜೆಂಟರ್ಗಳು, ISI ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಇಟ್ಟುಕೊಂಡಿವೆ,ಇವರು ಎಲ್ಲಾ ಕಡೆ ಕೋಮು ಗಲಭೆ ಮಾಡುವ ಕುತಂತ್ರ ಹೊಂದಿದ್ದಾರೆ ಅಂತಾ ಆರೋಪಿಸಿದ್ರು.
ಇದೇ ವೇಳೆ ಅಮಿತ್ ಶಾ ಬಂದಾಗ ಸಚಿವ ಸಂಪುಟ ವಿಸ್ತರಣೆ ವಿಚಾರ ಚರ್ಚೆ ಆಗುತ್ತಾ ಇಲ್ವಾ ಅದು ನನಗೆ ಗೊತ್ತಿಲ್ಲ ಅಂತಾ ಅಂದ್ರು. ಸರ್ಕಾರ ರಚನೆ ಮಾಡಲು ಯಾರು ಸಹಾಯ ಮಾಡಿದ್ದಾರೆ ಅವರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಈ ಕುರಿತು ಸಿಎಂ ಬಿಎಸ್‌ವೈ ಹಾಗೂ ಅಮಿತ್ ಶಾ ಅವರು ಒಟ್ಟಾಗಿ ನಿರ್ಧರಿಸಲಿದ್ದರೆ ಅಂತಾ ತಿಳಿಸಿದರು.