ಯಾದಗಿರಿ: ಭಾರತೀಯ ಜೈನ್ ಸಂಘದಿಂದ ನಡೆಯುತ್ತಿರುವ ಯಾದಗಿರಿ ನಗರದ ದೊಡ್ಡ ಕೆರೆ ಹೂಳೆತ್ತುವ ಹಾಗೂ ಅಗಲೀಕರಣ ಕಾಮಗಾರಿಯನ್ನು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಅವರು ಪರಿಶೀಲಿಸಿದರು.
ಯಾದಗಿರಿ ದೊಡ್ಡ ಕೆರೆಯು 12.53 ಎಂ.ಸಿ.ಎಫ್.ಟಿ ಸಾಮರ್ಥ್ಯ ಹೊಂದಿದ್ದು, ಸುಮಾರು 50 ಹೆಕ್ಟೇರ್ ನೀರಾವರಿ ಪ್ರದೇಶ ಹೊಂದಿದೆ. ಸದರಿ ಕಾಮಗಾರಿಯಿಂದ ದೊಡ್ಡ ಕೆರೆಗೆ ಬರುವ ಒಳ ಹರಿವು ಹೆಚ್ಚಾಗಲಿದೆ. ಸುಮಾರು 5 - 6 ವರ್ಷಗಳಿಂದ ಕೆರೆ ತುಂಬಿಲ್ಲ. ಹೀಗಾಗಿ ಹೂಳೆತ್ತುವ ಕಾಮಗಾರಿಗೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಕೆರೆ ತುಂಬುವುದು ಎಂಬ ಆಶಾಭಾವನೆ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇನ್ನು ಈ ಸಂದರ್ಭದಲ್ಲಿಯೇ ಕೆರೆ ದಂಡೆಯ ಮೇಲೆ ಗಿಡಗಳನ್ನು ನೆಡಬೇಕು ಹಾಗೂ ಅವಶ್ಯವಿರುವ ಕಡೆ ಚೆಕ್‍ಡ್ಯಾಮ್ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ, ಸಣ್ಣ ನೀರಾವರಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಬಸವರಾಜ ಮಾಲಿ ಪಾಟೀಲ್, ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಸಮದ್ ಪಟೇಲ್, ಪೌರಾಯುಕ್ತರಾದ ಬಕ್ಕಪ್ಪ, ಕೃಷಿ ಇಲಾಖೆ ತಾಂತ್ರಿಕ ಸಹಾಯಕರಾದ ಕೇದಾರನಾಥ, ಭಾರತೀಯ ಜೈನ್ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಅಜಿತ್ ಜೈನ್, ಬಿಜೆಎಸ್ ಜಿಲ್ಲಾ ಸಂಯೋಜಕರಾದ ರಾಜೇಶ ಜೈನ್, ಕಾರ್ಯದರ್ಶಿ ದಿನೇಶ್ ಜೈನ್ ಅವರು ಹಾಜರಿದ್ದರು.