ETV Bharat / state

ಗುರುಮಠಕಲ್​ನಲ್ಲಿ ಕರ್ಫ್ಯೂ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು

author img

By

Published : May 8, 2021, 10:13 AM IST

ಗುರುಮಠಕಲ್ ತಾಲೂಕಿನ ಸಮಸ್ಯೆಗಳನ್ನು ಸರಿಪಡಿಸಲು ಹಾಗೂ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಪೂರೈಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ನೀರಿನ ಸರಬರಾಜು, ಅಂತರ್​ ರಾಜ್ಯಗಳಿಂದ ಹಿಂದಿರುಗುವವರು, ಕೋವಿಡ್ ಪ್ರಕರಣಗಳು, ಔಷಧಗಳ ಪೂರೈಕೆ, ಲಸಿಕೆಯ ಲಭ್ಯತೆ, ಲಸಿಕೆ ಪಡೆಯುತ್ತಿರುವವರ ಕುರಿತು ಮಾಹಿತಿ ನೀಡಬೇಕು ಎಂದು ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

Gurumathkal
ಗುರುಮಠಕಲ್​ನಲ್ಲಿ ಕರ್ಫ್ಯೂ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು: ಸಚಿವ ಪ್ರಭು ಚವ್ಹಾಣ್

ಗುರುಮಠಕಲ್: ಯಾದಗಿರಿ ಜಿಲ್ಲೆಯಲ್ಲಿ ಕೋವಿಡ್​ನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಗುರುಮಠಕಲ್ 2ನೇ ಸ್ಥಾನದಲ್ಲಿದೆ. ಹೀಗಾಗಿ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಜನತಾ ಕರ್ಫ್ಯೂ ಇನ್ನೂ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದರು.

ಸಚಿವ ಪ್ರಭು ಚವ್ಹಾಣ್

ಗುರುಮಠಕಲ್ ಪುರಸಭೆ ಕಾರ್ಯಾಲಯದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಗುರುಮಠಕಲ್ ತಾಲೂಕಿನ ಸಮಸ್ಯೆಗಳನ್ನು ಸರಿಪಡಿಸಲು ಹಾಗೂ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಪೂರೈಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಕೋವಿಡ್ 2ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ತಜ್ಞರಿಂದ ಮೂರನೇ ಅಲೆಯ ಮುನ್ಸೂಚನೆಯೂ ಸಿಕ್ಕಿದೆ. ಆದ್ದರಿಂದ ಅಧಿಕಾರಿಗಳು ಕೋವಿಡ್ ತಡೆಗೆ ಸೂಚಿಸಿರುವ ಕ್ರಮಗಳನ್ನು ಆದ್ಯತೆಯಲ್ಲಿ ಮಾಡಬೇಕು. ನೀರಿನ ಸರಬರಾಜು, ಅಂತರ್​ ರಾಜ್ಯಗಳಿಂದ ಹಿಂದಿರುಗುವವರು, ಕೋವಿಡ್ ಪ್ರಕರಣಗಳು, ಔಷಧಗಳ ಪೂರೈಕೆ, ಲಸಿಕೆಯ ಲಭ್ಯತೆ, ಲಸಿಕೆ ಪಡೆಯುತ್ತಿರುವವರ ಕುರಿತು ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಟ್ಟಣದ ಆಸ್ಪತ್ರೆಯಲ್ಲಿ ಆಮ್ಲಜನಕದ ಪೂರೈಕೆ ಮಾಡುವ ಕುರಿತು ಜಿಲ್ಲಾ ವೈಧ್ಯಾಧಿಕಾರಿಗಳಿಂದ ಮಾಹಿತಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ವೈದ್ಯಾಧಿಕಾರಿ ಡಾ. ಇಂದುಮತಿ, ಈಗಾಗಲೇ ಆಮ್ಲಜನಕದ ಪೈಪ್​ಲೈನ್ ಕೆಲಸ ಆರಂಭವಾಗಿದೆ. ಪೂರೈಕೆಗೆ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿದ್ದು, ಇನ್ನೂ ಮೂರು ದಿನಗಳಲ್ಲಿ ಪಟ್ಟಣದ ಆಸ್ಪತ್ರೆಗೆ 30 ಆಮ್ಲಜನಕದ ಸಿಲಿಂಡರ್ ಒದಗಿಸುವುದಾಗಿ ಮಾಹಿತಿ ನೀಡಿದರು.

ಓದಿ: ಬಾಗಲಕೋಟೆಯಲ್ಲಿ ಇನ್ಮುಂದೆ ಮದುವೆಗಳಿಗೆ ಅನುಮತಿ ಇಲ್ಲ: ಡಿಸಿಎಂ ಕಾರಜೋಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.