ETV Bharat / state

ಹೊರ ಜಿಲ್ಲೆಯ ವಲಸಿಗರು ಮರಳಿ ಗೂಡಿಗೆ: ಇದು ಈಟಿವಿ ಭಾರತ ವರದಿ ಪರಿಣಾಮ

author img

By

Published : Apr 29, 2020, 11:39 AM IST

ತಾಲೂಕಿನ ಕೆಂಭಾವಿ ಪಟ್ಟಣದ ಸಂಜೀವ ನಗರದಲ್ಲಿ ವಾಸವಾಗಿದ್ದ ಹೊರ ಜಿಲ್ಲೆಯ ಜನರಿಗೆ ತಮ್ಮ ವಾಸಸ್ಥಳಗಳಿಗೆ ಮರಳುವ ಭಾಗ್ಯ ಸಿಕ್ಕಿದೆ. ಆದರೆ, ಇಲ್ಲೇ ಇರುವ ಹೊರರಾಜ್ಯದ ಜನರಿಗೆ ಈ ಸೌಲಭ್ಯ ದೊರಕಿಲ್ಲ.

Migrants from the outer district return to their native: ETV bharat
ಹೊರ ಜಿಲ್ಲೆಯ ವಲಸಿಗರು ಮರಳಿ ಗೂಡಿಗೆ: ಈಟಿವಿ ಭಾರತ ಫಲಶೃತಿ

ಸುರಪುರ(ಯಾದಗಿರಿ): ತಾಲೂಕಿನ ಕೆಂಭಾವಿ ಪಟ್ಟಣದ ಸಂಜೀವ ನಗರದಲ್ಲಿ ವಾಸವಾಗಿದ್ದ ಹೊರ ಜಿಲ್ಲೆಯ ಜನರಿಗೆ ತಮ್ಮ ಸ್ಥಳಗಳಿಗೆ ಮರಳುವ ಭಾಗ್ಯ ಸಿಕ್ಕಿದೆ.

ಹೊರ ಜಿಲ್ಲೆಯ ವಲಸಿಗರು ಮರಳಿ ಗೂಡಿಗೆ: ಈಟಿವಿ ಭಾರತ ವರದಿ ಪರಿಣಾಮ

ಮಹಾರಾಷ್ಟ್ರ, ಗುಜರಾತ್ ರಾಜ್ಯಗಳು ಹಾಗು ‌‌‌‌‌‌‌‌‌ಕಲಬುರಗಿ, ಕೊಪ್ಪಳ ಜಿಲ್ಲೆ ಸೇರಿದಂತೆ ಮತ್ತಿತರೆಡೆಗಿನ 40ಕ್ಕೂ ಹೆಚ್ಚು ಕುಟುಂಬಗಳು ಜಿಲ್ಲೆಗೆ ಕೂಲಿಗೆಂದು ಬಂದಿದ್ದವು. ಆದ್ರೆ, ಕೊರೊನಾ ಲಾಕ್‌ಡೌನ್ ಘೋಷಣೆಯಾದ ಕಾರಣ ತಮ್ಮೂರುಗಳಿಗೆ ಮರಳಲಾಗದೆ ತೀವ್ರ ತೊಂದರೆಗೆ ಸಿಲುಕಿದ್ದವು. ಜನರ ಸಂಕಷ್ಟದ ಬಗ್ಗೆ ಈಟಿವಿ ಭಾರತ ವಿಸ್ತೃತ ವರದಿ ಪ್ರಕಟಿಸಿತ್ತು.

ಸಂಕಷ್ಟದಲ್ಲಿ ವಲಸೆ ಕಾರ್ಮಿಕರು: ತಮ್ಮ ರಾಜ್ಯಗಳಿಗೆ ವಾಪಸ್​ ಕಳಿಸಿಕೊಡುವಂತೆ ಸರ್ಕಾರಕ್ಕೆ ಮನವಿ

ಕಲಬುರಗಿಯ ಕಮಲಾಪುರ, ಕೊಪ್ಪಳ ಜಿಲ್ಲೆಯ ಕುಟುಂಬಗಳನ್ನು ವಾಪಸ್ ತಮ್ಮ ವಾಸ ಸ್ಥಳಗಳಿಗೆ ಕಳುಹಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡು ಬಸ್‌ ವ್ಯವಸ್ಥೆ ಕಲ್ಪಿಸಿದೆ. ಆದರೆ, ಹೊರ ರಾಜ್ಯದ ವಲಸಿಗರಿಗೆ ಇನ್ನೂ ಈ ಅವಕಾಶ ಬಂದಿಲ್ಲವೆಂದು ತೋರುತ್ತಿದೆ.

ಈ ಕುರಿತು ವಲಸೆ ಕುಟುಂಬಗಳ ಜನರು ಮಾತನಾಡಿ, ನಾವು ನಮ್ಮ ಜಿಲ್ಲೆಗೆ ಹಿಂತಿರುಗುತ್ತಿದ್ದೇವೆ. ಆದರೆ, ನಮ್ಮ ಸಂಬಂಧಿಗಳು ಗುಜರಾತ್, ಮಹಾರಾಷ್ಟ್ರದಲ್ಲಿದ್ದಾರೆ. ಆದಷ್ಟು ಬೇಗ ಸರ್ಕಾರ ಅವರನ್ನೂ ಅವರ ಊರುಗಳಿಗೆ ಕಳುಹಿಸಿದರೆ ದೊಡ್ಡ ಉಪಕಾರವಾಗಲಿದೆ ಎಂದು ವಿನಂತಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.