ಯಾದಗಿರಿ: ಕೊರೊನಾ ವೈರಸ್ನಿಂದ ಕಂಗಾಲಾಗಿ ಮಹಾರಾಷ್ಟ್ರದಲ್ಲಿ ಸಿಲುಕಿರುವ ಜಿಲ್ಲೆಯ ವಲಸೆ ಕಾರ್ಮಿಕರು ವಾಪಸ್ ಆಗುತ್ತಿದ್ದು, ವಾಪಸ್ ಆದ ಕಾರ್ಮಿಕರು ಪರದಾಡುವಂತಾಗಿದೆ.
ಮಹಾರಾಷ್ಟ್ರದಿಂದ ಇಂದು ಬೆಳಿಗ್ಗೆ ಆಗಮಿಸಿದ ಕೂಲಿ ಕಾರ್ಮಿಕರು ಕ್ವಾರಂಟೈನ್ ಕೇಂದ್ರದ ಗೊಂದಲದಿಂದಾಗಿ ಮರದ ಕೆಳಗಡೆ ನಿದ್ದೆಗೆ ಜಾರುವಂತಾಯಿತು. ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಇಂದು ಆಗಮಿಸಿದ ನೂರಾರು ಕಾರ್ಮಿಕರಿಗೆ ಜ್ವರ ತಪಾಸಣೆ ನಡೆಸಿದ ಬಳಿಕ ಸೀಲ್ ಹಾಕಿ ಅವರನ್ನು ನಗರದ ಡಿಗ್ರಿ ಕಾಲೇಜ್ ಬಳಿ ತಾತ್ಕಾಲಿಕವಾಗಿ ಇರಲು ಸೂಚಿಸಲಾಗಿದೆ.
ಸ್ಥಳದ ಗೊಂದಲದಿಂದಾಗಿ ಕಾರ್ಮಿಕರು, ಮಹಿಳೆಯರು ಸೇರಿದಂತೆ ಚಿಕ್ಕ ಮಕ್ಕಳು ಮರದ ಕೆಳಗೆ ನರಳಾಡುವಂತಾಯಿತು. ಮಧ್ಯಾಹ್ನ ಆದರೂ ಕೂಡ ಇವರಿಗೆ ಅಧಿಕಾರಿಗಳು ಕ್ವಾರಂಟೆನ್ ಸ್ಥಳ ನಿಗದಿ ಮಾಡದ ಕಾರಣ ಬೆಳಗ್ಗೆಯಿಂದ ಸ್ನಾನ ಮಾಡದೆ ರಾತ್ರಿಯಿಡೀ ಪ್ರಯಾಣ ಬೆಳೆಸಿದ ಕಾರ್ಮಿಕರು ಆಯಾಸ ತಾಳಲಾರದೆ ಕೆಲವರು ಮರದ ಕೆಳಗಡೆ ನಿದ್ದೆಗೆ ಜಾರಿದ್ರು.
ಅಂತರ್ ರಾಜ್ಯಗಳಿಂದ ಆಗಮಿಸುತ್ತಿರುವ ಜಿಲ್ಲೆಯ ವಲಸೆ ಕಾರ್ಮಿಕರು ಒಂದಲ್ಲ ಇಂದು ಸಂಕಷ್ಟಕ್ಕೆ ತುತ್ತಾಗುವ ಮೂಲಕ ನರಕಯಾತನೆ ಅನುಭವಿಸುವಂತಾಗಿದೆ. ಈಗಾಗಲೇ ಲಾಕ್ಡೌನ್ನಿಂದ ಬೇರೆ ರಾಜ್ಯಗಳಲ್ಲಿ ನರಕಯಾತನೆ ಅನುಭವಿಸಿ ಜಿಲ್ಲೆಗೆ ಆಗಮಿಸುತ್ತಿರುವ ಕಾರ್ಮಿಕರಿಗೆ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಗಬೇಕಾಗಿದೆ.