ಯಾದಗಿರಿ: ಜಿಲ್ಲೆಯ ಬೆನಕನಹಳ್ಳಿ ಬಸ್ ನಿಲ್ದಾಣ ಮುಂಭಾಗದಲ್ಲಿ ಮಟಕಾ ದಂಧೆಯಲ್ಲಿ ತೊಡಗಿದ್ದ ಬುಕ್ಕಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಹುಣಸಗಿ ತಾಲೂಕಿನ ಬೆನಕನ ಹಳ್ಳಿ ಗ್ರಾಮದ ಬಸ್ ನಿಲ್ದಾಣ ಮುಂಭಾಗದಲ್ಲಿ ಮಟಕಾ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಡಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಡಿಸಿಬಿ ಇನ್ಸ್ಪೆಕ್ಟರ್ ದೌಲತ್ ಎನ್. ಕೆ. ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು, ಬೆನಕನಹಳ್ಳಿ ಗ್ರಾಮದ ಶರಣಪ್ಪ ಕೆಂಬಾವಿ, ವೆಂಕಟೇಶ ದಾಸರ್ ಎಂಬುವರನ್ನು ಬಂಧಿಸಿದ್ದಾರೆ. ಅವರಿಂದ 17,380 ರೂ. ವಶಪಡಿಸಿಕೊಂಡಿದ್ದಾರೆ.