ಸುರಪುರ: ಬಾವಿಯಲ್ಲಿ ಈಜಲು ಹೋದ ಯುವಕ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಕ್ಕೇರ ಸಮೀಪದ ಮಂಜಲಾಪುರ ಗ್ರಾಮದಲ್ಲಿ ನಡೆದಿದೆ.
ಮುಸಲಾಪುರ ಗ್ರಾಮದ ಯುವಕ ಅಯ್ಯಾಳಪ್ಪ ಲಾಠಿ (20) ಯುಗಾದಿ ಹಬ್ಬದ ಅಂಗವಾಗಿ ಬಣ್ಣದ ಹಬ್ಬದ ಬಳಿಕ ಮಧ್ಯಾಹ್ನ ಗ್ರಾಮದ ಹೊರವಲಯದಲ್ಲಿರುವ ಇಂದರಗ್ಯಾರ ಬಾವಿಯಲ್ಲಿ ಈಜಾಡಲು ಹೋಗಿದ್ದಾನೆ. ಈ ವೇಳೆ ದುರ್ಘಟನೆ ನಡೆದಿದೆ.
ಮಂಗಳವಾರ ಸಂಜೆ ವೇಳೆಗೆ ಮನೆಯವರು ಯುವಕನಿಗಾಗಿ ಹುಡುಕಾಟ ನಡೆಸಿದ್ದು, ಎಲ್ಲಿಯೂ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗಿನ ಜಾವ ಜನರು ಹೊಲಕ್ಕೆ ಹೋಗುವಾಗ ಬಾವಿಯ ದಂಡೆಯಲ್ಲಿ ಮೃತ ಯುವಕ ಅಯ್ಯಪ್ಪನ ಬಟ್ಟೆಗಳನ್ನು ನೋಡಿದ್ದಾರೆ. ನಂತರ ಬಾವಿಯಲ್ಲಿ ಹುಡುಕಾಟ ನಡೆಸಿದಾಗ ಶವ ಪತ್ತೆಯಾಗಿದೆ.
ಇದನ್ನೂ ಓದಿ: ಮುಷ್ಕರಕ್ಕೆ ಬೆಂಬಲ ಕೋರಿ ಸಾರಿಗೆ ನೌಕರರ ಒಕ್ಕೂಟದಿಂದ ನಟ ಯಶ್‌ಗೆ ಪತ್ರ
ಕಕ್ಕೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.