ಸುರಪುರ: ನಾರಾಯಣಪುರ ಜಲಾಶಯ ವೀಕ್ಷಿಸಿ ಮನೆಗೆ ಬರುತ್ತಿದ್ದ ವೇಳೆ ಅಪಘಾತವಾಗಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಗರದ ಮೇದಾರಗಲ್ಲಿಯ ವೆಂಕಟೇಶ ಚವಲ್ಕರ್ (28) ಮೃತ ವ್ಯಕ್ತಿ. ಈತ ತನ್ನ ಗೆಳೆಯರೊಂದಿಗೆ ನಾರಾಯಣಪುರ ಜಲಾಶಯ ನೋಡಿ ಬರಲೆಂದು ನಿನ್ನೆ ತರಳಿದ್ದ. ರಾತ್ರಿ ಬರುವಾಗ ಹುಣಸಗಿ ಸಮೀಪದ ಕಾಮನಟಗಿ ಗ್ರಾಮದ ಬಳಿಯಲ್ಲಿ ರಸ್ತೆ ಬದಿಯ ಮರಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ವೆಂಕಟೇಶ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ವ್ಯಕ್ತಿಗೆ ಇಬ್ಬರು ಮಕ್ಕಳು ಮತ್ತು ಪತ್ನಿ ಇದ್ದು, ಸುರಪುರ ನಗರದಲ್ಲಿ ಹೆಣ್ಣು, ತರಕಾರಿ ವ್ಯಾಪಾರ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ. ಈ ಸಂಬಂಧ ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.