ETV Bharat / state

ಗೂಡ್ಸ್‌​ ವಾಹನದಿಂದ ಬಿದ್ದು ವ್ಯಕ್ತಿ ಸಾವು: ಚಾಲಕ ಪರಾರಿ - ಬುಲೆರೋ ಅಪಘಾತ ಸುದ್ದಿ

ಸರಕು ಸಾಗಣೆ ವಾಹನ ಚಾಲಕನ ನಿರ್ಲಕ್ಷ್ಯದಿಂದ ವ್ಯಕ್ತಿಯೊರ್ವ ಸಾವನ್ನಪ್ಪಿದ ಘಟನೆ ಸುರಪುರ ತಾಲೂಕಿನ ಬಾದ್ಯಾಪೂರ ಗ್ರಾಮದ ಬಳಿ ನಡೆದಿದೆ. ಘಟನೆ ನಂತರ ಚಾಲಕ ಪರಾರಿಯಾಗಿದ್ದಾನೆ.

man-dead after -fallen-form-goods-vehicle-in-badyapura
ಸವಾರ ಸಾವು
author img

By

Published : May 24, 2020, 11:35 PM IST

ಸುರಪುರ: ಸರಕು ಸಾಗಣೆ ವಾಹನದಿಂದ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ತಾಲೂಕಿನ ಬಾದ್ಯಾಪುರ ಗ್ರಾಮದಲ್ಲಿ ನಡೆದಿದೆ.

ಬ್ಯಾದ್ಯಾಪುರ ಗ್ರಾಮದ ಸಿದ್ದಪ್ಪ ಮಲ್ಲಪ್ಪ ಮಗ್ಗದ (55 ವರ್ಷ) ಮೃತ ವ್ಯಕ್ತಿ. ಸುರಪುರದಿಂದ ಬೊಲೆರೋ ಮ್ಯಾಕ್ಸ್​ ವಾಹನದಲ್ಲಿ ಸಿಮೆಂಟ್​ ತೆಗೆದುಕೊಂಡು ಬರುವಾಗ ಬೈರಿಮುರಡಿ ಕ್ರಾಸ್​ ಬಳಿ ವಾಹನದಿಂದ ಬಿದ್ದು ಸಿದ್ದಪ್ಪ ಗಂಭೀರವಾಗಿ ಗಾಯಗೊಂಡಿದ್ದ.

ನಂತರ ಸಿದ್ದಪ್ಪನನ್ನು ರಾಯಚೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಸೋಲಾಪುರಕ್ಕೆ ಕರೆದೊಯ್ಯಲು ತಿಳಿಸಿದ್ದರು. ಸೋಲಾಪುರಕ್ಕೆ ತೆರಳುವ ಮಾರ್ಗ ಮದ್ಯ ಸಿದ್ದಪ್ಪ ಸಾವನ್ನಪ್ಪಿದ್ದಾರೆ.

ಘಟನೆಗೆ ಗೂಡ್ಸ್​ ವಾಹನ ಚಾಲಕನ ಅಜಾಗರೂಕತೆಯೇ ಕಾರಣವೆಂದು ತಿಳಿದು ಬಂದಿದ್ದು, ವಾಹನ ಚಾಲಕ ಪರಾರಿಯಾಗಿದ್ದಾನೆ. ಸುರಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.