ಸುರಪುರ: ತಾಲೂಕಿನ ದೇವಾಪುರ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾನಾಯಕ ಧಾರಾವಾಹಿಯ ಬ್ಯಾನರ್ ಅನಾವರಣ ಹಾಗೂ ಅಂಬೇಡ್ಕರ್ ಮೂರ್ತಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಯಿತು.
ಸುರಪುರ ತಾಲೂಕಿನ ದೇವಪುರ ಕ್ರಾಸ್ ಬಳಿಯ ಬೀದರ್ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಡೆದ ಅನಾವರಣ ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹನುಮಪ್ಪನಾಯಕ ತಾತ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಡಾ. ಬಿ ಆರ್ ಅಂಬೇಡ್ಕರ್ ಅವರು ಬಾಲ್ಯದಿಂದಲೂ ಅನೇಕ ಕಷ್ಟಗಳನ್ನು ಎದುರಿಸಿ ಇಡೀ ಜಗತ್ತೇ ಮೆಚ್ಚುವಂತಹ ಭಾರತದ ಸಂವಿಧಾನವನ್ನು ರಚಿಸಿಕೊಟ್ಟ ನಿಜವಾದ ಮಹಾ ನಾಯಕರಾಗಿದ್ದಾರೆ. ಅವರ ಜೀವನ ಮತ್ತು ಸಾಧನೆಗಳನ್ನು ತಿಳಿಯಲು ಜೀ ಕನ್ನಡ ವಾಹಿನಿ ಪ್ರಸಾರ ಪಡಿಸುತ್ತಿರುವ ಮಹಾನಾಯಕ ಧಾರವಾಹಿ ನೋಡುವುದು ಎಲ್ಲರ ಭಾಗ್ಯದ ವಿಷಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯ ನಂದನ ಗೌಡ ಪಾಟೀಲ್, ನಗರಸಭೆ ಸದಸ್ಯ ನರಸಿಂಹ ಕಾಂತ ಪಂಚಮಾಗಿರಿ, ನಗರಸಭೆ ಮಾಜಿ ಸದಸ್ಯ ವೆಂಕಟೇಶ ಹೊಸಮನಿ ಹಾಗೂ ಮುಖಂಡರಾದ ರಾಹುಲ್ ಹುಲಿಮನಿ ಮಾಳಪ್ಪ ಕಿರದಳ್ಳಿ, ಬಸನಗೌಡ ರಾಜಪುರ್, ಶಿವಲಿಂಗ ಹಸನಾಪುರ, ರಾಮು ನಾಯಕ್, ಅರಳಹಳ್ಳಿ ಚನ್ನಪ್ಪ ತಳವಾರ್, ನಿಂಗಪ್ಪ ಹಿರೇಕುರುಬರ ಮಾಹದೇವ, ಚಲುವಾದಿ ವೆಂಕಟೇಶ್ ಹಯ್ಯಾಳಪ್ಪ ,ಗಂಜಾಳಿ ಬಸವರಾಜ, ಜನಕರ ಅಕ್ಕಪ್ಪ, ಸಾಹುಕಾರ ಯೂಸುಫ್ ಸಾಬ್, ಕಂಡಕ್ಟರ್ ಬಸನಗೌಡ ಪಾಟೀಲ್, ಮಾರ್ತಾಂಡ ಯಾಳಗಿಮಾನಪ್ಪ ನಾಗರಾಳ ಇದ್ದರು.