ಸುರಪುರ: ಸುರಪುರ ತಾಲೂಕಿನ ಯಾಳಗಿ ಗ್ರಾಮದಲ್ಲಿ ಸುಮಾರು 3 ರಿಂದ 4 ಸಾವಿರ ಜಾನುವಾರುಗಳಿದ್ದು, ಒಂದರಿಂದ ಒಂದರಂತೆ ಎಲ್ಲ ಪಶುಗಳಿಗೂ ಲಿಂಪಿ ವೈರಸ್ ಹಾಗೂ ಹಲವು ವಿವಿಧ ವೈರಸ್ ಅಂಟಿಕೊಂಡಿದ್ದು, ಜಾನುವಾರುಗಳ ಗೋಳು ಕೇಳುವರಿಲ್ಲದಂತಾಗಿದೆ.
ಪಶುಗಳಿಗೆ ಸೂಕ್ತ ತಜ್ಞ ವೈದ್ಯರಿಲ್ಲದ ಕಾರಣ ಹಲವು ವೈರಸ್ಗಳಿಗೆ ಜಾನುವಾರುಗಳು ಬಲಿಯಾಗುತ್ತಿವೆ. ಇದರಿಂದ ಕೃಷಿ ಚಟುವಟಿಕೆ ಮಾಡಲಾಗದೇ ಮತ್ತು ಲಕ್ಷಾಂತರ ಹಣ ನೀಡಿ ಖರೀದಿಸಿದ ಪಶುಗಳ ಸ್ಥಿತಿ ನೋಡಿ ರೈತರು ಕಣ್ಣಿರು ಸುರಿಸುವಂತಾಗಿದೆ.
ಪಶುಮಂತ್ರಿ ಪ್ರಭು ಚೌಹಾಣ್ ಉಸ್ತುವಾರಿಯ ಜಿಲ್ಲೆಯ ಕಡೆ ಗಮನವಹಿಸಿ ಮೂಕ ವೇದನೆ ಅನುಭವಿಸುತ್ತಿರುವ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ದೊರಕುವಂತೆ ಮಾಡಿಕೊಡಬೇಕೆಂದು ರೈತರು ಮನವಿ ಮಾಡುತ್ತಿದ್ದಾರೆ. ರೈತರ ಮನವಿಗೆ ಜಿಲ್ಲಾಡಳಿತ ಹಾಗೂ ಪಶು ಇಲಾಖೆ ಗಮನವಹಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಅಲ್ಲದೇ ಜಿಲ್ಲೆಯ ಜಾನುವಾರುಗಳಲ್ಲಿ ಹೆಚ್ಚುತ್ತಿರುವ ಲಂಪಿ ಕಾಯಿಲೆ ಕುರಿತು ಶಾಸಕ ರಾಜುಗೌಡ ಮಾತನಾಡಿ, ಲಂಪಿ ಕಾಯಿಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.