ಯಾದಗಿರಿ: ಸಿಡಿಲು ಬಡಿದು ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ಅಜ್ಜ-ಮೊಮ್ಮಗ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೆಂಭಾವಿ ಗ್ರಾಮಾಂತರದ ಹೊರವಲಯದಲ್ಲಿ ನಡೆದಿದೆ.
ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ವ್ಯಾಪ್ತಿಯಲ್ಲಿರುವ ನಗನೂರ ಗ್ರಾಮದ ಸೀಮಾಂತರ ವಲಯದಲ್ಲಿನ ಜಮೀನಿನಲ್ಲಿ ಕುರಿ ಮೇಯಿಸುತ್ತಿರುವಾಗ ಸಿಡಿಲು ಬಡಿದು ಅಜ್ಜ ಮಲ್ಲಪ್ಪ ಯರವಾಳ ಹಾಗೂ ಮೊಮ್ಮಗ ದೇವರಾಜ್ ಯರವಾಳ (14) ಸಾವನ್ನಪ್ಪಿದ್ದಾರೆ.
ಕುರಿ ಮೇಯಿಸುತ್ತಿರುವ ವೇಳೆ ಏಕಾಏಕಿ ಮಳೆ ಬಂದ ಹಿನ್ನೆಲೆ ಅಜ್ಜ-ಮೊಮ್ಮಗ ಬಂಡೆಯ ಬಳಿ ಆಶ್ರಯ ಪಡೆದಿದ್ದಾರೆ. ದುರಾದೃಷ್ಟವಶಾತ್ ಸಿಡಿಲಿನ ಹೊಡೆತಕ್ಕೆ ಇಬ್ಬರೂ ಬಲಿಯಾಗಿದ್ದಾರೆ.
ಈ ಸಂಬಂಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.