ಯಾದಗಿರಿ : ಜಿಲ್ಲೆಯ ಶಹಾಪುರ ತಾಲೂಕಿನ ಜಯಶ್ರೀ ಚಿತ್ರ ಮಂದಿರದಲ್ಲಿ ಕುರುಕ್ಷೇತ್ರ ಚಿತ್ರ ಅಬ್ಬರಿಸಿ ಬೊಬ್ಬಿರಿಸುತ್ತಿದ್ದು, ದಚ್ಚು ಅಭಿಮಾನಿಗಳು ಪುಲ್ ಫಿದಾ ಆಗಿದ್ದಾರೆ.
ಜಿಲ್ಲೆಯಲ್ಲಿ ಕುರುಕ್ಷೇತ್ರ ಚಿತ್ರ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು, ದಿನಕ್ಕೆ ಮೂರು ಶೋಗಳು ಪ್ರದರ್ಶಿಸಲಾಗುತ್ತಿದೆ. ಕುರುಕ್ಷೇತ್ರ ಅಭಿಮಾನಿಗಳಿಗೆ ರಸದೌತಣವನ್ನು ನೀಡುತ್ತಿದ್ದು, ಚಿತ್ರವನ್ನು ವೀಕ್ಷಿಸಲು ಅಭಿಮಾನಿಗಳು ಪಕ್ಕದ ಜಿಲ್ಲೆಗಳಿಂದಲೂ ಆಗಮಿಸುತ್ತಿದ್ದಾರೆ.
ಚಿತ್ರ ಮಂದಿರದ ಆವರಣದ ಗೇಟ್ನ ಮುಂಭಾಗದಲ್ಲಿ ಸಾವಿರಾರು ಅಭಿಮಾನಿಗಳು ಟಿಕೇಟ್ಗಾಗಿ ಮುಂಜಾನೆಯಿಂದಲೇ ಜಮಾಯಿಸುತ್ತಿದ್ದು, ಟಿಕೇಟ್ ಸಿಗದೆ ಪರದಾಡುತ್ತಿದ್ದಾರೆ. ಥಿಯೇಟರ್ ಹೌಸ್‌ಫುಲ್ ಆಗಿದ್ರೂ ಚಿತ್ರ ವೀಕ್ಷಿಸಲು ಬಿಡುವಂತೆ ಮಾಲೀಕರಿಗೆ ಆಗ್ರಹಿಸುತ್ತಿದ್ದಾರೆ.