ಯಾದಗಿರಿ: ಕೃಷ್ಣಾನದಿಯ ತಟದಲ್ಲಿರುವ ನಿವಾಸಿಗಳು ಯಾವುದೇ ರೀತಿಯ ಭಯಪಡದೆ ಜೀವನ ನಡೆಸಬಹುದು ಎಂದು ಗ್ರಾಮಸ್ಥರಿಗೆ ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಅಭಯ ನೀಡಿದ್ದಾರೆ. ನದಿ ಪಾತ್ರಗಳ ಸಮೀಪಕ್ಕೆ ಹೋಗಬಾರದು ಎಂದು ಡಂಗುರ ಬಾರಿಸುವ ಮುಖಾಂತರ ಅರಿವು ಮೂಡಿಸಲಾಗುತ್ತಿದ್ದು, ನೀರು ಹರಿಯುವತ್ತ ಯಾರೂ ಸುಳಿಯಬಾರದು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ...ಕೃಷ್ಣಾನದಿಯಲ್ಲಿ ಪ್ರವಾಹ: ಮುಳುಗುವ ಭೀತಿಯಲ್ಲಿ ಛಾಯ ಭಗವತಿ ದೇಗುಲ
ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾನದಿಯ ದಡದಲ್ಲಿರುವ ನಿವಾಸಿಗಳು ಭಯದಿಂದ ಜೀವನ ನಡೆಸುತ್ತಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ. ಗ್ರಾಮಸ್ಥರು ಧೈರ್ಯದಿಂದ ಇರುವಂತೆ ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ... ಕೃಷ್ಣಾ ನದಿ ಪ್ರವಾಹ.. ನಡುಗಡ್ಡೆಗಳಂತಾದ ಗ್ರಾಮಗಳು.. ತೀರ ಪ್ರದೇಶದಲ್ಲಿ ತೀವ್ರ ನಿಗಾ!