ಯಾದಗಿರಿ: ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 28 ನಾಮಪತ್ರಗಳು ಸಲ್ಲಿಕೆಯಾಗಿವೆ. ಸೋಮವಾರ ಯಾದಗಿರಿಯಲ್ಲಿ ವೆಂಕಟರೆಡ್ಡಿ ಮುದ್ನಾಳ 2, ಚನ್ನಾರೆಡ್ಡಿ ಪಾಟೀಲ ತುನ್ನೂರು 1, ಸುರಪುರದಲ್ಲಿ ರಾಜೂಗೌಡ 4, ಮೈತ್ರಾ ನರಸಿಂಹ ನಾಯಕ 2, ರಾಜಾ ವೆಂಕಟಪ್ಪ ನಾಯಕ ಒಂದು, ಶಹಾಪುರದಲ್ಲಿ ಶರಣಬಸಪ್ಪ ದರ್ಶನಾಪುರ 1, ಗುರುಲಿಂಗಪ್ಪಗೌಡ (ಗುರುಪಾಟೀಲ ಶಿರವಾಳ) 2, ಅಮೀನರೆಡ್ಡಿ ಪಾಟೀಲ 2 ನಾಮಪತ್ರ ಸಲ್ಲಿಸಿದ್ದಾರೆ.
ಸುರಪುರ ವಿಧಾನಸಭಾ ಕ್ಷೇತ್ರದಿಂದ: ಕಾಂಗ್ರೆಸ್‌ನಿಂದ ರಾಜಾ ವೆಂಕಟಪ್ಪನಾಯಕ ರಾಜಾಕುಮಾರನಾಯಕ ಒಂದು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ನರಸಿಂಹನಾಯಕ ಶಂಭನಗೌಡ ನಾಲ್ಕು ಹಾಗೂ ಮತ್ತೊಬ್ಬ ಅಭ್ಯರ್ಥಿ ಮೈತ್ರಾ ನರಸಿಂಹನಾಯಕ ಸೇರಿ ಇಬ್ಬರು ನಾಮಪತ್ರ ಸಲ್ಲಿಸಿದರು.
ಶಹಾಪುರ ವಿಧಾನಸಭಾ ಮತಕ್ಷೇತ್ರದ ಮೂವರು ಅಭ್ಯರ್ಥಿಗಳು 5 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಿಂದ ಶರಣಬಸಪ್ಪಗೌಡ ಬಾಪುಗೌಡ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್‌ನಿಂದ ಗುರುಲಿಂಗಪ್ಪಗೌಡ ಶಿವಶಂಕರಪ್ಪಗೌಡ 2 ನಾಮಪತ್ರ ಹಾಗೂ ಬಿಜೆಪಿಯಿಂದ ಅಮೀನರೆಡ್ಡಿ ಶರಣಗೌಡ ಪಾಟೀಲ ಎರಡು ನಾಮಪತ್ರ ಸಲ್ಲಿಸಿದರು.
ಯಾದಗಿರಿ ಮತಕ್ಷೇತ್ರದಿಂದ ಇಬ್ಬರು ಅಭ್ಯರ್ಥಿಗಳು 3 ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ವೆಂಕಟರೆಡ್ಡಿ ವಿಶ್ವನಾಥರೆಡ್ಡಿ ಮುದ್ನಾಳ ಎರಡು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಿಂದ ಚನ್ನಾರೆಡ್ಡಿಗೌಡ ಮಲ್ಲಾರಡ್ಡೆಪ್ಪಗೌಡ ಪಾಟೀಲ ತುನ್ನೂರು ನಾಮಪತ್ರ ಸಲ್ಲಿಸಿದ್ದಾರೆ.
ಗುರಮಠಕಲ್ ವಿಧಾನಸಭಾ ಮತಕ್ಷೇತ್ರದಿಂದ ನಾಲ್ವರು ಅಭ್ಯರ್ಥಿಗಳು 6 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಜೆಡಿಎಸ್‌ನಿಂದ ಶರಣಗೌಡ ನಾಗನಗೌಡ ಅವರಿಂದ ಎರಡು ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್‌ನಿಂದ ನಾಗನಗೌಡ ಮಲ್ಲಿಕಾರ್ಜುನಪ್ಪ ಕಂದಕೂರ ಅವರು ಎರಡು ಹಾಗೂ ಕಾಂಗ್ರೆಸ್‌ನಿಂದ ಬಾಬುರಾವ ಬಸವಣ್ಣಪ್ಪ ಚಿಂಚನಸೂರ ಒಂದು ನಾಮಪತ್ರ ಹಾಗೂ ಬಿಜೆಪಿಯಿಂದ ಲಲಿತಾ ಮೌಲಾಲಿ ಅವರ ನಾಮಪತ್ರ ಸಲ್ಲಿಕೆಯಾಗಿದೆ.
7 ಅಭ್ಯರ್ಥಿಗಳಿಂದ ನಾಮಪತ್ರ: ಮಂಗಳವಾರ ಏಳು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿವೆ. ಶೋರಾಪುರ ವಿಧಾನಸಭಾ ಕ್ಷೇತ್ರದಿಂದ ಒಟ್ಟು ಒಂದು ನಾಮಪತ್ರ ಸಲ್ಲಿಕೆಯಾಗಿದ್ದು, ಆಮ್ ಆದ್ಮಿ ಪಕ್ಷದಿಂದ ಆರ್.ಮಂಜುನಾಥ ನಾಯಕ ತಂದೆ ನರಸಿಂಹ ನಾಯಕ ಅವರು ಒಂದು ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ಡಾ.ಎ.ಬಿ.ಮಾಲಕರೆಡ್ಡಿ ತಂದೆ ಲಕ್ಷ್ಮಣರೆಡ್ಡಿ ಅವರು ಒಂದು ನಾಮಪತ್ರ ಸಲ್ಲಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ಯಂಕಪ್ಪ ತಂದೆ ದೇವಿಂದ್ರಪ್ಪ ಅವರು ಒಂದು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಎಸ್.ಯು.ಸಿ.ಐ (ಕಮ್ಮೂನಿಸ್ಟ್) ಸೋಶಿಯಲ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದಿಂದ ಕೆ.ಸೋಮಶೇಖರ ತಂದೆ ಭಾಗಣ್ಣ ಅವರು ಒಂದು ನಾಮಪತ್ರ ಸಲ್ಲಿಸಿದ್ದಾರೆ. ಡಾ.ಅಂಬೇಡ್ಕರ ಪೀಪಲ್ಸ್ ಪಕ್ಷದಿಂದ ಮಾರುತಿರಾವ ತಂದೆ ಬಸಣ್ಣ ಅವರು ಒಂದು ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಭೀಮಣ್ಣ ತಂದೆ ಗುರುಬಸಯ್ಯ ಅವರು ಒಂದು ನಾಮಪತ್ರ ಸಲ್ಲಿಸಿದ್ದಾರೆ.
ಗುರಮಿಠಕಲ್ ವಿಧಾನಸಭಾ ಮತಕ್ಷೇತ್ರದಿಂದ ಉತ್ತಮ ಪ್ರಜಾಕೀಯ ಪಕ್ಷದಿಂದ ಮಲ್ಲಿಕಾರ್ಜುನ ತಂದೆ ಹಣಮಂತು ಅವರು ಒಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಾದ ಸ್ನೇಹಲ್ ಆರ್. ಅವರು ತಿಳಿಸಿದ್ದಾರೆ.
ಮಾಜಿ ಸಚಿವ ಮಾಲಕರೆಡ್ಡಿ ನಾಮಪತ್ರ ಸಲ್ಲಿಕೆ: ಯಾದಗಿರಿ ಮತಕ್ಷೇತ್ರಕ್ಕೆ ಜೆಡಿಎಸ್ ಘೋಷಿತ ಅಭ್ಯರ್ಥಿಯಾಗಿ ಮಾಜಿ ಸಚಿವ ಡಾ.ಎ.ಬಿ. ಮಾಲಕರೆಡ್ಡಿ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಚುನಾವಣಾಧಿಕಾರಿ ಶಾ ಆಲಂ ಹುಸೇನ್ ಅವರಿಗೆ ಮಂಗಳವಾರ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಅವರು ನಗರದ ಆಂಜನೇಯ ಸ್ವಾಮಿ, ಹೇಮರೆಡ್ಡಿ ಮಲ್ಲಮ್ಮ, ಮಹಾಲಕ್ಷ್ಮೀ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥಿಸಿದರು.
ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಳೆದ 4 ದಶಕಗಳ ರಾಜಕಾರಣದಲ್ಲಿ 5 ಬಾರಿ ಶಾಸಕ, ಒಂದು ಭಾರಿ ಪರಿಷತ್ ಸದಸ್ಯ, 2 ಭಾರಿ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ಈ ಮತಕ್ಷೇತ್ರದಲ್ಲಿ ಹರಿಯುವ ಭೀಮಾ ನದಿಗೆ 5-6 ಬ್ರಿಡ್ಜ್ ಕಂ ಬ್ಯಾರೆಜ್‌ಗಳನ್ನು ನಿರ್ಮಾಣ ಮಾಡಿದ್ದರಿಂದ ರೈತರು ತಮ್ಮ ಜಮೀನನ್ನು ನೀರಾವರಿ ಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. ಆರ್ಥಿಕವಾಗಿ ಬದಲಾವಣೆಗೆ ಶ್ರಮಿಸಿದ್ದೇನೆ ಎಂದರು.
ಜನರ ಬೇಡಿಕೆಯಂತೆ ಅವರಿಗೆ ಶಾಶ್ವತ ಅನುಕೂಲವಾಗುವ ಯೋಜನೆಗಳನ್ನು ಜಾರಿಯಾಗಲೂ ಶ್ರಮಿಸಿದ್ದೇನೆ. ಜನರ ಒತ್ತಾಯಕ್ಕೆ ಮಣಿದು ರೈತರ ಪರ ನಿಲುವು ಹೊಂದಿರುವ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದಿದ್ದೇನೆ. ನಮ್ಮ ಜಿಲ್ಲೆಗೆ ನೀರಾವರಿ ಸೌಕರ್ಯ ಕಲ್ಪಿಸಿರುವುದೇ ಜೆಡಿಎಸ್ ಪಕ್ಷದ ಅಧಿನಾಯಕ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು. ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ ಕುಮಾರಸ್ವಾಮಿ ಅವರು ಕೂಡ ರೈತರ ಸಾಲ ಮನ್ನಾ ಮಾಡಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವ ಮೂಲಕ ಪ್ರಾದೇಶಿಕ ಪಕ್ಷಕ್ಕೆ ಶಕ್ತಿ ತುಂಬುತ್ತೇವೆ ಎಂದರು.
ಇದನ್ನೂ ಓದಿ: ಪುಲಕೇಶಿನಗರದಲ್ಲಿ ಎಐಎಡಿಎಂಕೆ ಅಭ್ಯರ್ಥಿ ಅಖಾಡಕ್ಕೆ..!