ಯಾದಗಿರಿ: ಬಿಡದೇ ಸುರಿಯುತ್ತಿರುವ ಮಳೆಗೆ ನೀರಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರ ಬ್ರಿಡ್ಜ್ಗೆ ಜಿಲ್ಲಾ ನ್ಯಾಯಾಧೀಶರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹುಣಸಗಿ ತಾಲೂಕಿನ ನಾರಾಯಣಪೂರ ಗ್ರಾಮದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 4,51,680 ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ನದಿ ಪಾತ್ರದ ಜನರು ತತ್ತರಿಸಿ ಹೋಗಿದ್ದಾರೆ. ಬಸವ ಸಾಗರ ಜಲಾಶಯದ 24 ಗೇಟುಗಳ ಪೈಕಿ 22 ಗೇಟುಗಳ ಮುಖಾಂತರ ಕೆಬಿಜೆಎನ್ಎಲ್ ಅಧಿಕಾರಿಗಳು ಕೃಷ್ಣಾ ನದಿಗೆ ನೀರು ಹರಿಬಿಟ್ಟಿದ್ದು, ನದಿ ಪಾತ್ರದ ಜಮೀನುಗಳು ಹಾಗೂ ಗ್ರಾಮಗಳು ಸಂಪೂರ್ಣವಾಗಿ ಜಲಾವೃತವಾಗಿವೆ.
ಕೃಷ್ಣಾ ನದಿಗೆ ಜೋಡಣೆಯಾಗಿರುವ ನೀಲಕಂಠರಾಯನ ನಡುಗಡ್ಡೆ, ಕೊಳ್ಳೂರ ಬ್ರಿಡ್ಜ್, ಗೌಡಗೇರಾ, ಶೆಳ್ಳಗಿ, ಹೆಮ್ಮಡಗಿ, ಗೂಗಲ್ ಬ್ರಿಡ್ಜ್ ಸಂಪೂರ್ಣವಾಗಿ ಜಲಾವೃತವಾಗಿವೆ. ಹೀಗಾಗಿ ಯಾದಗಿರಿ ಜಿಲ್ಲಾ ನ್ಯಾಯಧೀಶರು ಕೊಳ್ಳೂರ ಬ್ರಿಡ್ಜ್ಗೆ ಭೇಟಿ ನೀಡಿ ಪರಿಶೀಲಿಸಿ, ಜಿಲ್ಲಾಡಳಿತದಿಂದ ಮುಂಜಾಗೃತ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಸಂಗಮೇಶ ಜಡಗಿಗೆ ಸೂಚನೆ ನೀಡಿದ್ದಾರೆ.