ಯಾದಗಿರಿ: ಮೇ. 3ರವರೆಗೂ ಲಾಕ್ಡೌನ್ ಮುಂದುವರಿದ ಹಿನ್ನೆಲೆ ಯಾದಗಿರಿ ನಗರದಲ್ಲಿ ಬಡಜನತೆ ಮತ್ತು ನಿರಾಶ್ರಿತರಿಗೆ ಹತ್ತು ದಿನಕ್ಕೆ ಆಗುವಷ್ಟು ಆಹಾರ ಸಾಮಗ್ರಿಳನ್ನು ವಿತರಿಸಲಾಯಿತು.
ಜೆಡಿಎಸ್ ಮುಖಂಡ ಹಣಿಮೆಗೌಡ ಬಿರನಕಲ್ ಅವರ ನೇತೃತ್ವದಲ್ಲಿ 10 ಲಕ್ಷ ಮೌಲ್ಯದ ಒಟ್ಟು ಮೂರು ಸಾವಿರಕ್ಕೂ ಹೆಚ್ಚು ಆಹಾರ ಪದಾರ್ಥಗಳ ಕಿಟ್ಗಳನ್ನು ವಿತರಣೆ ಮಾಡಲಾಯಿತು. ಅಂಬೇಡ್ಕರ್ ನಗರ, ವಾಲ್ಮೀಕಿ ನಗರ ಸೇರಿದಂತೆ ಒಟ್ಟು ನಗರದ 31 ವಾರ್ಡ್ಗಳಲ್ಲಿ ಬಡವರು, ನಿರ್ಗತಿಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ ನೀಡಲಾಗಿದೆ.
5 ಕೆಜಿ ಅಕ್ಕಿ, ಅರ್ಧ ಕೆಜಿ ಎಣ್ಣೆ, ಇತರ ಅಡುಗೆ ಸಾಮಗ್ರಿಗಳನ್ನು ನೀಡಲಾಗಿದೆ. ಇದರಿಂದ ನಿರ್ಗತಿಕರಿಗೆ ಅನುಕೂಲವಾಗಿದೆ. ಇನ್ನು ಕೆಲ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ದಾನಿಗಳು ಜನರ ಸಂಕಷ್ಟಕ್ಕೆ ನೆರವಾಗುತ್ತಿರುವುದರಿಂದ ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಬಡವರಿಗೆ ಈ ಮೂಲಕ ಆತ್ಮ ಸ್ಥೈರ್ಯ ತುಂಬುತ್ತಿದ್ದಾರೆ.