ETV Bharat / state

ನಾನು ಸಿದ್ದರಾಮಯ್ಯನವರ ಅಭಿಮಾನಿ, ಅದರಲ್ಲಿ ಎರಡು ಮಾತಿಲ್ಲ.. ಶಾಸಕ ರಾಜುಗೌಡ - MLA Raju Gowda statement

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ಪಕ್ಷದ ಆಸ್ತಿಯಲ್ಲ. ಇಡೀ ರಾಜ್ಯದ ಆಸ್ತಿ. ಇವರು ಯಾರೂ ಒಂದು ಪಕ್ಷಕ್ಕಷ್ಟೇ ಅಲ್ಲ. ರಾಜ್ಯದಲ್ಲಿ ಸಾಧನೆ ಮಾಡಿರೋ ನಾಯಕರು..

MLA Raju Gowda
ನಾನು ಸಿದ್ದರಾಮಯ್ಯನವರ ಅಭಿಮಾನಿ: ಶಾಸಕ ರಾಜುಗೌಡ
author img

By

Published : Feb 20, 2021, 8:14 PM IST

ಸುರಪುರ: ನಾನು ಸಿದ್ದರಾಮಯ್ಯನವರ ಅಭಿಮಾನಿಯಾಗಿದ್ದೇನೆ ಎಂದು ಸುರಪುರ ಬಿಜೆಪಿ ಶಾಸಕ ನರಸಿಂಹನಾಯಕ (ರಾಜುಗೌಡ) ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದರು.

ನಾನು ಸಿದ್ದರಾಮಯ್ಯನವರ ಅಭಿಮಾನಿ : ಬಿಜೆಪಿ ಶಾಸಕ ರಾಜುಗೌಡ

ಸುರಪುರ ತಾಲೂಕಿನ ಖಾನಾಪುರ ಎಸ್​.ಹೆಚ್ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವುದಿಲ್ಲ ಎನ್ನುವ ವರದಿಗಾರರ ಪ್ರಶ್ನೆಗೆ ಉತ್ತರಿಸಿ, ಸಿದ್ದರಾಮಯ್ಯನವರ ಹೆಸರಲ್ಲೇ ರಾಮ ಇದ್ದಾನೆ.

ಹಾಗಾಗಿ, ನಾನು ಒಬ್ಬ ಸಿದ್ದರಾಮಯ್ಯನವರ ಅಭಿಮಾನಿಯಾಗಿ ಅವರು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸುವುದಾಗಿ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ಪಕ್ಷದ ಆಸ್ತಿಯಲ್ಲ. ಇಡೀ ರಾಜ್ಯದ ಆಸ್ತಿ ಎಂದರು.

ಇನ್ನು, ಬಿಜೆಪಿ ಪಕ್ಷದಲ್ಲಿ ಹಣ ನೀಡಿದರೆ ಕೆಲಸ ಆಗುತ್ತದೆ ಹಾಗೂ ಪಿಎಫ್ಐ ಸಂಘಟನೆ ರಾಮಮಂದಿರಕ್ಕೆ ದೇಣಿಗೆ ನೀಡಬೇಡಿ ಎನ್ನುತ್ತಿದೆ ಎನ್ನುವುದರ ಕುರಿತು ಈ ವೇಳೆ ಪ್ರತಿಕ್ರಿಯಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸನಗೌಡ ಯಡಿಯಾಪುರ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹನುಮಪ್ಪನಾಯಕ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.