ಯಾದಗಿರಿ: ಮಳೆ ಅವಾಂತರದಿಂದ ಮನೆ ಕುಸಿದ ಹಿನ್ನೆಲೆ ಕುಟುಂಬವೊಂದು ಬೀದಿಯಲ್ಲಿ ಬದುಕು ಸಾಗಿಸುತ್ತಿದೆ. ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ ಗಾಳೆಪ್ಪ ಎಂಬುವವರ ಮನೆ 9 ದಿನದ ಹಿಂದೆ ಭಾರಿ ಮಳೆ ಸುರಿದ ಹಿನ್ನೆಲೆ ಮನೆ ಕುಸಿದಿತ್ತು.
ಮನೆಯಲ್ಲಿರುವ ವಸ್ತುಗಳಿಗೂ ಕೂಡ ಹಾನಿಯಾಗಿದೆ. ಪರಿಣಾಮ ಕಳೆದ 9 ದಿನಗಳಿಂದ ಬಾಣಂತಿ, ಮಗು ಸೇರಿ 7 ಜನ ಮನೆ ಬಿದ್ದ ಜಾಗದ ಪ್ರದೇಶದ ಮುಂಭಾಗದಲ್ಲಿ ಆಶ್ರಯ ಕಲ್ಪಿಸಿಕೊಂಡಿದ್ದಾರೆ.
ಮನೆ ಬಿದ್ದ ಜಾಗದ ಪ್ರದೇಶವೇ ಈಗ ಇವರಿಗೆ ಆಶ್ರಯ ತಾಣವಾಗಿದೆ. ಬಿದಿ ಬದಿಯಲ್ಲಿ ಅಡುಗೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಮಳೆ ಬಂದರೆ ವಾಸ ಮಾಡಲು ಪರದಾಡುವಂತಾಗಿದೆ.
ಸರಕಾರ ತಾತ್ಕಾಲಿಕವಾಗಿ ಮನೆ ದುರಸ್ತಿ ಮಾಡಿಸಿ ಅನುಕೂಲ ಮಾಡಬೇಕಿತ್ತು. ಆದರೆ, ಅಗತ್ಯ ಪಡಿತರ ಧಾನ್ಯ ನೀಡಿ ಕೈತೊಳೆದುಕೊಂಡಿದೆ. ಸರಕಾರ ಇಲ್ಲವೇ ಸಂಘ ಸಂಸ್ಥೆಯವರು ಸಹಾಯ ಮಾಡಿ ಈ ಕುಟುಂಬಕ್ಕೆ ನೆರವಾಗಬೇಕಿದೆ.