ಸುರಪುರ: ಸಂಜೆ ವೇಳೆಗೆ ಸುರಿದ ಅಕಾಲಿಕ ಮಳೆಗೆ ಹಂಚಿನ ಮನೆ ಹಾನಿಗೊಳಗಾಗಿದ್ದು, ಸಾವಿರಾರು ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು, ಆಹಾರ ಧಾನ್ಯಗಳು ನೀರು ಪಾಲಾಗಿವೆ.
ವಾರ್ಡ್ ನಂ.16 ದಾಸರಗಲ್ಲಿಯ ಮಹಾದೇವಿ ಚಂದ್ರಶೇಖರ್ ಎಂಬುವವರಿಗೆ ಸೇರಿದ ತಗಡಿನ ಮನೆಯನ್ನು ಮಳೆ ಧ್ವಂಸಗೊಳಿಸಿದೆ.
ಸಾಲ ಮಾಡಿ ತಗಡಿನ ಮನೆ ಮಾಡಿಕೊಂಡಿದ್ದ ಮಹಾದೇವಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಈಗ ಇದ್ದ ಮನೆಯೂ ಹಾಳಾಗಿದ್ದು, ಟಿ.ವಿ, ಸೇರಿದಂತೆ ಸಾಮಾಗ್ರಿಗಳೆಲ್ಲಾ ಹಾನಿಯಾಗಿ ಅಸಹಾಯಕತೆ ವ್ಯಕ್ತಪಡಿಸಿದರು.
ಮನೆ ಬಿದ್ದ ಸ್ಥಳಕ್ಕೆ ತಾಲೂಕು ದಂಡಾಧಿಕಾರಿ ನಿಂಗಣ್ಣ ಬಿರಾದಾರ್, ಕಂದಾಯ ನಿರೀಕ್ಷಕ ಗುರುಬಸಪ್ಪ, ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್ ನಾಲ್ವಡೆ, ಸಂತೋಷ ರಾಠೋಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.