ಯಾದಗಿರಿ(ರಾಯಚೂರು): ಕಳೆದ ಎರಡು-ಮೂರು ದಿನಗಳಿಂದ ಜಿಲ್ಲೆಯಲ್ಲಿ ಸುರಿದ ಮಳೆಗೆ ಜನರು ಇನ್ನಿಲ್ಲದ ಸಮಸ್ಯೆ ಅನುಭವಿಸಿದ್ದು, ರೈತರು ಬೆಳೆದ ಬೆಳೆ ನೆಲ ಕಚ್ಚಿವೆ.
ಅನೇಕ ರೈತರು ಜಮೀನಿನಲ್ಲಿ ಬೆಳೆದಿದ್ದ ಚೆಂಡು ಹೂವಿನ ಬೆಳೆ ಮಳೆಯಿಂದಾಗಿ ನೆಲಕ್ಕುರುಳಿ ಹಾಳಾಗಿದೆ. ಪ್ರಮುಖವಾಗಿ ಶಹಾಪುರ ತಾಲೂಕಿನ ದೋರನಹಳ್ಳಿ ತಾಂಡಾ, ಶಖಾಪೂರ್, ಗೋಗಿ, ಚಾಮನಾಳ ಸೇರಿದಂತೆ ಅಂದಾಜು 60ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಚಂಡು ಹೂವಿನ ಬೆಳೆ ಬೆಳೆಯಲಾಗಿದೆ. ತಾಲೂಕಿನಲ್ಲಿ 3 ಹೆಕ್ಟೇರ್ ಪ್ರದೇಶದಲ್ಲಿ ಚಂಡು ಹೂವು ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಅದರ ಆಧಾರದಲ್ಲಿ ಒಂದು ಹೆಕ್ಟೇರ್ ಗೆ 13, 500 ರು.ಗಳ ಪರಿಹಾರ ನೀಡಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ಎಕರೆಗೆ 4 ಸಾವಿರ ರೂ. ಹಾಗೂ ಇತರ ರೈತರಿಗೆ 6 ಸಾವಿರ ರೂ ಸಹಾಯಧನವನ್ನು ರಾಷ್ಟ್ರೀಯ ತೋಟಗಾರಿಕೆ ಬಸಿಲ್ ವತಿಯಿಂದ ನೀಡಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರತಿ ಎಕೆರೆಗೆ 15 ರಿಂದ 20 ಸಾವಿರ ರೂ. ಖರ್ಚು ಮಾಡಿ ಚೆಂಡು ಹೂವು ಬೆಳೆಯಾಳಾಗಿದ್ದು, ಆದರೆ, ಇದೀಗ ಮಳೆ ಹೆಚ್ಚಾಗಿರುವುದರಿಂದ ಬರುವ ಆದಾಯಕ್ಕೆ ಕತ್ತರಿ ಬಿದ್ದಿದೆ ಎಂದು ರೈತ ಮಹಿಳೆ ರಾಧಾಬಾಯಿ ರಾಠೋಡ್ ಹೇಳಿಕೊಂಡಿದ್ದಾರೆ.