ಸೇಡಂ: ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ನದಿ ಪ್ರವಾಹದಿಂದ 158 ಮನೆಗಳಿಗೆ ನೀರು ನುಗ್ಗಿದೆ. 27 ಮನೆಗಳು ಕುಸಿತಗೊಂಡಿವೆ ಎಂದು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.
ಅನೇಕ ಮನೆಗಳು ಜಲಾವೃತವಾದ ಪರಿಣಾಮ ನೂರಾರು ಜನರು ಮೇಲ್ಛಾವಣಿಯಲ್ಲಿ ಆಶ್ರಯ ಪಡೆಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬರುತ್ತಿವೆ. ಮಳಖೇಡದಲ್ಲಿ 3 ಪರಿಹಾರ ಕೇಂದ್ರ ಆರಂಭಿಸಲಾಗಿದ್ದು, 476 ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ಜೊತೆಗೆ ಸಟಪಟನಹಳ್ಳಿಯ ಪರಿಹಾರ ಕೇಂದ್ರದಲ್ಲಿ 30 ಜನ ತಂಗಿದ್ದಾರೆ. ಅಲ್ಲದೆ ತೆಲ್ಕೂರ ಗ್ರಾಮದಲ್ಲಿ ಸಿಲುಕಿದ್ದ ಮೀನುಗಾರರ ರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.