ETV Bharat / state

ಹಠಾತ್​ ಗಾಳಿ, ಮಳೆಗೆ ಬೆಚ್ಚಿಬಿತ್ತು ಯಾದಗಿರಿ: ಹಾರಿ ಹೋಯ್ತು ನಗರಸಭೆಯ ಛಾವಣಿ!

ಬೇಸಿಗೆಯಲ್ಲಿ ಹಠಾತ್ ಬಂದ ಗಾಳಿ, ಮಳೆಯಿಂದ ಯಾದಗಿರಿ ಜಿಲ್ಲೆಯಾದ್ಯಂತ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ..

Heavy rain at Yadgir District
ಯಾದಗಿರಿಯಲ್ಲಿ ಮಳೆ ಅವಾಂತರ
author img

By

Published : Apr 5, 2021, 9:18 PM IST

Updated : Apr 5, 2021, 10:51 PM IST

ಸುರಪುರ : ಯಾದಗಿರಿ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ಅನೇಕ ಅನಾಹುತಗಳು ಸಂಭವಿಸಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ಹಠಾತ್ ಅಬ್ಬರಿಸಿದ ಮಳೆಯಿಂದ ಅವಾಂತರ

ನಗರಸಭೆಯ ಛಾವಣಿ ಕುಸಿತ! : ಬಿರುಗಾಳಿ ಸಹಿತ ಸುರಿದ ಮಳೆಗೆ ಯಾದಗಿರಿ ನಗರಸಭೆಯ ಮೇಲ್ಛಾವಣಿ ಕುಸಿದು ಕಾರ್ಯಾಲಯದಲ್ಲಿದ್ದ ಕುರ್ಚಿ, ಟೇಬಲ್ ಸೇರಿದಂತೆ ಅನೇಕ ವಸ್ತುಗಳು ಜಖಂಗೊಂಡಿವೆ.

Heavy rain at Yadgir District
ನಗರಸಭೆ ಕಾರ್ಯಾಲಯದ ಮೇಲ್ಛಾವಣಿ ಕುಸಿದಿರುವುದು

ನೀರು ಪಾಲಾಯ್ತು ಶೇಂಗಾ! : ಯಾದಗಿರಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಮಾರಾಟ ಮಾಡಲೆಂದು ತಂದಿದ್ದ ರೈತರ ಸಾವಿರಾರು ಕ್ವಿಂಟಾಲ್ ಶೇಂಗಾ ಮಳೆಯಿಂದಾಗಿ ನೀರಲ್ಲಿ ಕೊಚ್ಚಿ ಹೋಗಿದ್ದು, ರೈತರಿಗೆ ಭಾರಿ ನಷ್ಟವಾಗಿದೆ.

Heavy rain at Yadgir District
ನೀರು ಪಾಲಾದ ರೈತರ ಶೇಂಗಾ

ಓದಿ : ಕೋಸ್ಟಲ್ ಬರ್ತ್ ಯೋಜನೆ ಕಾಮಗಾರಿ ವಿರೋಧಿಸಿ ಬೆಂಗರೆ ಬಂದ್ ಬಹುತೇಕ ಯಶಸ್ವಿ..

ಸಿಡಿಲಿಗೆ ವ್ಯಕ್ತಿ ಬಲಿ! : ಯಾದಗಿರಿಯ ಬಸ್ ನಿಲ್ದಾಣದ ಬಳಿ ಗೋಡೆ ಕುಸಿದು ಹಲವು ಬೈಕ್‌ಗಳು ಗೋಡೆಯ ಅಡಿ ಸಿಲುಕಿ ಜಖಂಗೊಂಡಿವೆ. ಅಲ್ಲದೆ ವ್ಯಾಪಾರಿಗಳ ಹಣ್ಣು-ತರಕಾರಿ ಸಂಪೂರ್ಣ ಹಾಳಾಗಿವೆ. ಅಲ್ಲಿಪುರ ಗ್ರಾಮದಲ್ಲಿ ಸಿಡಿಲು ಬಡಿದು ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.

Heavy rain at Yadgir District
ಅಬ್ಬರಿಸಿದ ವರುಣ

ಮರಗಳು ಉರುಳಿ ಅವಾಂತರ! : ಯಾದಗಿರಿ-ಶಹಪುರ ಹೆದ್ದಾರಿಯಲ್ಲಿ ಮರಗಳು ಉರುಳಿ ಬಿದ್ದ ಪರಿಣಾಮ ಎರಡು ಗಂಟೆಗಳಿಗೂ ಹೆಚ್ಚು ಕಾಲ ರಸ್ತೆ ಸಂಚಾರ ಬಂದ್​ ಆಗಿತ್ತು. ಇದರಿಂದ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತು ವಾಹನ ಸವಾರರು ಪರದಾಡುವಂತಾಯಿತು.

Last Updated : Apr 5, 2021, 10:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.